ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾಲಿಂಪಿಕ್ಸ್‌ಗೆ ಅಶೋಕ್, ಪರಮ್‌ಜೀತ್ ಅರ್ಹತೆ

Published 21 ಮಾರ್ಚ್ 2024, 14:25 IST
Last Updated 21 ಮಾರ್ಚ್ 2024, 14:25 IST
ಅಕ್ಷರ ಗಾತ್ರ

ನವದೆಹಲಿ: ಈಜಿಪ್ಟ್‌ನ ಶರ್ಮ್ ಎಲ್ ಶೇಖ್‌ನಲ್ಲಿ ಗುರುವಾರ ನಡೆದ ಪ್ಯಾರಾ ಪವರ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ತಲಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಅಶೋಕ್ ಮತ್ತು ಪರಮ್‌ಜೀತ್‌ ಕುಮಾರ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

41 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಮನ್‌ಪ್ರೀತ್‌ ಕೌರ್ 86 ಕೆ.ಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. 

ಅಶೋಕ್ ಕ್ರಮವಾಗಿ 192 ಕೆ.ಜಿ ಮತ್ತು 196 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು. ಅವರ ಎರಡನೇ ಪ್ರಯತ್ನವನ್ನು 'ನೋ ಲಿಫ್ಟ್' ಎಂದು ಘೋಷಿಸಿದ ನಂತರ,  ತಮ್ಮ ಮೂರನೇ ಪ್ರಯತ್ನದಲ್ಲಿ 196 ಕೆಜಿ ಭಾರವನ್ನು ಎತ್ತಿದರು. 

ತೀವ್ರ ಪೈಪೋಟಿಯಿಂದ ಕೂಡಿದ್ದ 49 ಕೆ.ಜಿ ವಿಭಾಗದಲ್ಲಿ ಪರಮ್‌ಜೀತ್ ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ 160 ಕೆ.ಜಿ ಮತ್ತು 166 ಕೆ.ಜಿ ಎತ್ತಿದರು ಮತ್ತು ಸ್ವಲ್ಪದರಲ್ಲೇ ಚಿನ್ನದಿಂದ ವಂಚಿತರಾದರು.

‘ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಪ್ಯಾರಾ ಅಥ್ಲಿಟ್‌ನ ಕನಸು. ಆ ಕನಸನ್ನು ನನಸು ಮಾಡುವತ್ತ ಮಹತ್ವದ ಹೆಜ್ಜೆ ಇಟ್ಟಿರುವುದಕ್ಕೆ ನನಗೆ ಸಂತೋಷವಾಗಿದೆ. ದೇಶಕ್ಕೆ ಕೀರ್ತಿ ತರಲು ದೃಢನಿಶ್ಚಯ ಮಾಡಿದ್ದೇನೆ’ ಎಂದು ಅಶೋಕ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT