‘ನನಗೀಗ ಮೂವತ್ತು ವರ್ಷ. ಇನ್ನೈದು ವರ್ಷ ಕ್ರೀಡೆಯಲ್ಲಿರುತ್ತೇನೆ. ನಿವೃತ್ತಿಯ ನಂತರ ನನ್ನ ಜಿಲ್ಲೆ ಉಡುಪಿಯಲ್ಲಿ ಅಕಾಡೆಮಿಯೊಂದನ್ನು ಆರಂಭಿಸಿ, ಅಂತರರಾಷ್ಟ್ರೀಯ ವೇಟ್‌ಲಿಫ್ಟರ್‌ಗಳನ್ನು ಸಿದ್ಧಗೊಳಿಸುತ್ತೇನೆ. ಇದು ನನ್ನ ಬಹುದಿನಗಳ ಕನಸು’– ಸತತ ಎರಡು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿರುವ ಗುರುರಾಜ್ ಪೂಜಾರಿ ಅವರ ಮಾತುಗಳಿವು. ‘ಪ್ರಜಾವಾಣಿ ಸೆಲೆಬ್ರಿಟಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.