ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವ ದೇಶದ ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಶುಭಾಶಯ ಕೋರಿದರು.

ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, 2036ರ ಒಲಿಂಪಿಕ್ ಕೂಟದ ಆತಿಥ್ಯ ವಹಿಸುವ ದೇಶದ ಧೈರ್ಯಶಾಲಿ ಪ್ರಯತ್ನವನ್ನು ಅವರು ಬೆಂಬಲಿಸಿದರು.

‘ಸರ್ಕಾರದ ಪರಿಣಾಮಕಾರಿ ಪ್ರಯತ್ನಗಳಿಂದಾಗಿ, ಯುವ ಆಟಗಾರರು ಜಾಗತಿಕ ವೇದಿಕೆಗಳಲ್ಲಿ ದಾಖಲೆ ಸಂಖ್ಯೆಯ ಪದಕಗಳನ್ನು ಗೆಲ್ಲುತ್ತಿದ್ದಾರೆ’ ಎಂದರು.

‘ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೆ ನನ್ನ ಶುಭ ಹಾರೈಕೆಗಳು. ಈ ಸಾಧನೆಗಳನ್ನು ಮತ್ತಷ್ಟು ಮುಂದುವರಿಸಲು, ಭಾರತ ಒಲಿಂಪಿಕ್ ಅಸೋಸಿಯೇಷನ್ (ಐಒಎ) 2036ರ ಒಲಿಂಪಿಕ್ ಕೂಟದ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿದೆ’ ಎಂದು ಅವರು ಹೇಳಿದರು.

ದಾಖಲೆಯ 21 ಶೂಟರ್ಗಳು ಸೇರಿದಂತೆ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ಯಾರಿಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಹಿಂದಿನ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಏಳು ಪದಕಗಳನ್ನು ಗೆದ್ದಿತ್ತು. ಈ ಸಾಧನೆಯನ್ನು ಉತ್ತಮಗೊಳಿಸುವ ಗುರಿಯನ್ನು ಕ್ರೀಡಾಪಟುಗಳು ಹೊಂದಿದ್ದಾರೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಚ್ ಅವರ ಪ್ರೋತ್ಸಾಹದಿಂದ ಭಾರತವು 2036ರ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್ ಸಲ್ಲಿಸಲಿದೆ. ಆದರೆ, ಸೌದಿ ಅರೇಬಿಯಾ, ಇಂಡೊನೇಷ್ಯಾ ಮತ್ತು ಕತಾರ್ ನಂತಹ ಪ್ರಬಲ ದೇಶಗಳಿಂದ ತೀವ್ರ ಪೈಪೋಟಿ ಎದುರಿಸಲಿದೆ.

ಮುಂದಿನ ವರ್ಷ ಐಒಸಿ ಚುನಾವಣೆಯ ನಂತರವೇ 2036 ರ ಆತಿಥ್ಯ ವಹಿಸುವ ದೇಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.