ಯೋಧಾ ತಂಡದಲ್ಲಿರುವ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಆಲ್ರೌಂಡ್ ಆಟವಾಡಿದರು. ರೇಡಿಂಗ್ನಲ್ಲಿ ಏಳು, ಟ್ಯಾಕಲ್ನಲ್ಲಿ ಒಂದು ಮತ್ತು ಮೂರು ಬೋನಸ್ ಅಂಕಗಳನ್ನು ಗಳಿಸಿದರು. ಶ್ರೀಕಾಂತ್ ಜಾಧವ್ ಎಂಟು ಅಂಕಗಳನ್ನು ತಂಡಕ್ಕೆ ಕಾಣಿಕೆ ನೀಡಿದರು. ಅಜಾದ್ ಸಿಂಗ್ ರೇಡಿಂಗ್ನಲ್ಲಿ ಏಳು ಮತ್ತು ಒಂದು ಬೋನಸ್ ಅಂಕ ಪಡೆದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ಸಚಿನ್ ಕುಮಾರ್ ಮತ್ತು ಜೀವಾ ಕುಮಾರ ಅವರು ಕ್ರಮವಾಗಿ ಐದು ಮತ್ತು ನಾಲ್ಕು ಅಂಕಗಳನ್ನು ಗಳಿಸಿದರು.