ಪಟ್ನಾ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ ಬೆಂಗಳೂರು ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್ ನಡುವಿನ ಪಂದ್ಯ 28–28ರಿಂದ ಟೈ ಆಯಿತು.
ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ ಬೆಂಗಳೂರು ತಂಡವು 16–13ರಿಂದ ಮುನ್ನಡೆ ಹೊಂದಿತ್ತು. ಆದರೆ, ಉತ್ತರಾರ್ಧದಲ್ಲಿ ಪೈರೇಟ್ಸ್ ತಂಡವು ಪುಟಿದೆದ್ದು ಸಮಬಲ ಸಾಧಿಸಿತು.
ಪೈರೇಟ್ಸ್ ತಂಢದ ಸಂದೀಪ್ ಕುಮಾರ್ (14) ರೈಡಿಂಗ್‌ನಲ್ಲಿ ಮತ್ತು ಅಂಕಿತ್ ಜಗ್ಲಾನ್ (8) ಟ್ಯಾಕಲ್‌ನಲ್ಲಿ ಮಿಂಚಿದರು. ಬುಲ್ಸ್ ಪರ ಸುಶೀಲ್ ಮತ್ತು ಅಕ್ಷಿತ್ ಧುಳ್ ಕ್ರಮವಾಗಿ 8 ಮತ್ತು 6 ಪಾಯಿಂಟ್ಸ್ ಗಳಿಸಿದರು.
ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 42–27ರಿಂದ ತಮಿಳು ತಲೈವಾಸ್ ವಿರುದ್ಧ ಸುಲಭವಾಗಿ ಜಯ ಸಾಧಿಸಿತು. ಹೀಗಾಗಿ, 71 ಅಂಕಗಳೊಂದಿಗೆ ಜೈಪುರ ತಂಡವು ಮತ್ತೆ ಅಗ್ರಸ್ಥಾನಕ್ಕೆ ಏರಿತು.