ಮುಂಬೈ: ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್ ತಂಡ, ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಭಾನುವಾರ 29–26ರಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಪುಣೇರಿ 46 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಪುಣೇರಿ ಪರ ಮೊಹಮ್ಮದ್ ರೇಜಾ ಶಾಡ್ಲೌಯಿ 8 ಮತ್ತು ಗೌರವ್ ಖತ್ರಿ 6 ಅಂಕ ಕಲೆ ಹಾಕಿ ಮಿಂಚಿದರು. ತಂಡವು ರೈಡಿಂಗ್ನಿಂದ 12 ಮತ್ತು ಟ್ಯಾಕಲ್ನಿಂದ 13 ಪಾಯಿಂಟ್ಸ್ ಸಂಗ್ರಹಿಸಿತು. ಇದು 10 ಪಂದ್ಯಗಳಲ್ಲಿ ಪುಣೇರಿ ತಂಡಕ್ಕೆ 9ನೇ ಜಯ.

ಮೊದಲಾರ್ಧದಲ್ಲಿ 12–11 ಅಂಕಗಳಿಂದ ಮುನ್ನಡೆಯಲ್ಲಿದ್ದ ಪುಣೇರಿ ತಂಡವು ಉತ್ತರಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿತು.

ತಮಿಳ್ ಪರ ಸಾಗರ್ 11 ಮತ್ತು ನರೇಂದ್ರ ಹೋಶಿಯಾರ್ 4 ಅಂಕ ಸಂಪಾದಿಸಿದರು. ತಲೈವಾಸ್ ತಂಡ 14 ಅಂಕ ಗಳಿಸಿ 11ನೇ ಸ್ಥಾನದಲ್ಲಿದೆ.

ಹರಿಯಾಣ ಸ್ಟೀಲರ್ಸ್ ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮೇಲೆ 41–35 ಪಾಯಿಂಟ್ಸ್ ಅಂತರದ ಜಯ ಗಳಿಸಿತು. ಹರಿಯಾಣ ಪರ ಚಂದ್ರನ್ ರಂಜಿತ್ ಮತ್ತು ಶಿವಂ ಪಟಾರೆ ತಲಾ 7 ಪಾಯಿಂಟ್ಸ್ ಕಲೆ ಹಾಕಿದರು.

ಇಂದಿನ ಪಂದ್ಯ: ಬೆಂಗಳೂರು ಬುಲ್ಸ್–ಪಟ್ನಾ ಪೈರೇಟ್ಸ್, ರಾತ್ರಿ 8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.