ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಪೂರ್ಣಿಮಾ ಪಾಂಡೆ

Last Updated 17 ಡಿಸೆಂಬರ್ 2021, 15:44 IST
ಅಕ್ಷರ ಗಾತ್ರ

ತಾಷ್ಕೆಂಟ್‌:ಭಾರತದ ಪೂರ್ಣಿಮಾ ಪಾಂಡೆ ಅವರು ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.ಮಹಿಳೆಯರ 87+ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು, ಪದಕದ ಹಾದಿಯಲ್ಲಿ ಎಂಟು ರಾಷ್ಟ್ರೀಯ ದಾಖಲೆಗಳನ್ನು ಬರೆದರು.

ಪೂರ್ಣಿಮಾ, ಒಟ್ಟು 229 ಕೆ.ಜಿ (102 ಕೆ.ಜಿ. ಹಾಗೂ 127 ಕೆ.ಜಿ.) ಭಾರ ಎತ್ತುವ ಮೂಲಕ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡರು.

ಸ್ನ್ಯಾಚ್ ವಿಭಾಗದಲ್ಲಿ ಎರಡು ಮತ್ತು ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ತಲಾ ಮೂರು ರಾಷ್ಟ್ರೀಯ ದಾಖಲೆಗಳನ್ನು ಪೂರ್ಣಿಮಾ ಬರೆದರು.

ಪುರುಷರ 109 ಕೆ.ಜಿ ವಿಭಾಗದಲ್ಲಿ 348 ಕೆ.ಜಿ (161 ಕೆ.ಜಿ. + 187 ಕೆ.ಜಿ.) ಸಾಧನೆ ಮಾಡಿದ ಲವ್‌ಪ್ರೀತ್ ಸಿಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಏಷ್ಯನ್ ಯೂತ್ ಹಾಗೂ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಲವ್‌ಪ್ರೀತ್, ಸ್ನ್ಯಾಚ್ ವಿಭಾಗದಲ್ಲಿ ಮೂರು ಮತ್ತು ಕ್ಲೀನ್ ಹಾಗೂ ಜರ್ಕ್ ವಿಭಾಗದಲ್ಲಿ ತಲಾ ಒಂದು ದಾಖಲೆಗಳನ್ನು ಬರೆದರು.

ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ ಅನುರಾಧಾ ಪವುನ್‌ರಾಜ್ ಒಟ್ಟು 195 ಕೆ.ಜಿ. (90 ಕೆ.ಜಿ. + 105 ಕೆ.ಜಿ.) ಭಾರ ಎತ್ತಿ ಕಂಚಿನ ಪದಕ ಗೆದ್ದರು.

ಪ್ರತಿ ವಿಭಾಗದಲ್ಲಿ ಚಿನ್ನದ ಪದಕ ಜಯಸುವ ವೇಟ್‌ಲಿಫ್ಟರ್‌ಗಳು ಮುಂದಿನ ವರ್ಷ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ನೇರ ಪ್ರವೇಶ ಗಳಿಸಲಿದ್ದಾರೆ. ಇನ್ನುಳಿದವರ ಅರ್ಹತೆಯು ರ‍್ಯಾಂಕಿಂಗ್‌ ಅನ್ನು ಅವಲಂಬಿಸಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT