ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಝಾ–ಗುರ್ಜೋತಾ ಜೋಡಿಗೆ ಕಂಚು

Published 21 ಜನವರಿ 2024, 15:53 IST
Last Updated 21 ಜನವರಿ 2024, 15:53 IST
ಅಕ್ಷರ ಗಾತ್ರ

ಕುವೈತ್‌: ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಿದ್ದ ಭಾರತದ ಶೂಟರ್‌ ರೈಝಾ ದಿಲ್ಲೋನ್ ಹಾಗೂ ಗುರ್ಜೋತ್‌ ಖಂಗುರಾ ಜೋಡಿಯು ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಶಾಟ್‌ಗನ್ ಸ್ಪರ್ಧೆಯ ಸ್ಕೀಟ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.

ಮೂರನೇ ಸ್ಥಾನಕ್ಕಾಗಿ ನಡೆದ ಸುತ್ತಿನಲ್ಲಿ ಭಾರತದ ಜೋಡಿ ಸ್ಥಳೀಯ ಫೇವರಿಟ್ ಅಬ್ದುಲ್ಲಾ ಅಲ್ ರಶೀದಿ ಮತ್ತು ಎಮಾನ್ ಅಲ್ ಶಮಾ ಅವರನ್ನು 41-39 ಅಂತರದಿಂದ ಸೋಲಿಸಿತು.

ಪುರುಷರ ಸ್ಕೀಟ್‌ನಲ್ಲಿ ಅನಂತ್ತಜೀತ್‌ ಸಿಂಗ್ ನರುಕಾ ಗೆದ್ದಿದ್ದರು. ರೈಝಾ ಮಹಿಳಾ ಸ್ಕೀಟ್ ತಂಡದ ಚಿನ್ನವನ್ನೂ ಗೆದ್ದಿದ್ದರು.

ಭಾರತ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ನಾಲ್ಕನೇ ಸ್ಥಾನದೊಂದಿಗೆ ಸ್ಪರ್ಧೆಯನ್ನು ಕೊನೆಗೊಳಿಸಿತು.

ಮೈರಾಜ್ ಅಹ್ಮದ್ ಖಾನ್ ಮತ್ತು ಗನೆಮತ್ ಸೆಖೋನ್ ಜೋಡಿ ಕಳೆದ ವರ್ಷ ಕೈರೋ ವಿಶ್ವಕಪ್ ಹಂತದಲ್ಲಿ ಚಿನ್ನ ಗೆದ್ದಿತ್ತು. ಕುವೈತ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೈಜಾ ಮತ್ತು ಗುರ್ಜೋತ್ ಕಂಚಿನ ಪದಕ ಗೆದ್ದರು.

ರೈಜಾ ಮತ್ತು ಗುರ್ಜೋತ್ 17 ಜೋಡಿಗಳ ಅರ್ಹತಾ ಸುತ್ತಿನಲ್ಲಿ 138 ಅಂಕಗಳನ್ನು ಗಳಿಸಿ ಎರಡನೇ ಪಂದ್ಯ  ಗೆದ್ದರು.  ಅವರು ಕುವೈತ್‌ನ ಅಲ್ ರಶೀದಿ ಮತ್ತು ಎಮಾನ್ ಅವರನ್ನು ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT