ಬೆಂಗಳೂರು: ರೋಟರಿ ಅಮೆಚೂರ್ ದಕ್ಷಿಣ ಭಾರತ ಗಾಲ್ಫ್ ಚಾಂಪಿಯನ್‌ಷಿಪ್ ಇದೇ 21ರಿಂದ ಬಿಡದಿಯ ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯಲಿದೆ. ದೇಶದ ಪ್ರಮುಖ ಪುರುಷರ ಮತ್ತು ಮಹಿಳಾ ಗಾಲ್ಫರ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಆತಂಕದಿಂದಾಗಿ ಕಳೆದ ವರ್ಷ ಚಾಂಪಿಯನ್‌ಷಿಪ್ ನಡೆದಿರಲಿಲ್ಲ.

21ರಿಂದ ನಾಲ್ಕು ದಿನ ಪುರುಷರ ಸ್ಪರ್ಧೆಗಳು ನಡೆಯಲಿದ್ದು 22ರಿಂದ ಮಹಿಳೆಯರ ಸ್ಪರ್ಧೆಗಳು ಇರುತ್ತವೆ. ಅಖಿಲ ಭಾರತ ಅಮೆಚೂರ್ ಗಾಲ್ಫ್ ಚಾಂಪಿಯನ್ ಕರ್ನಾಟಕದ ಆರ್ಯನ್ ರೂಪಾ ಆನಂದ್, ಮಹಾರಾಷ್ಟ್ರದ ರೋಹನ್ ಪಾಟೀಲ್, ರಾಜಸ್ತಾನದ ಪ್ರಖರ್, ಪಶ್ಚಿಮ ಬಂಗಾಳದ ಸ್ನೇಹಾ ಸಿಂಗ್ ಮುಂತಾದವರು ಕಣದಲ್ಲಿರುವ ಪ್ರಮುಖರು.

ಸ್ಥಳೀಯ ಗಾಲ್ಫರ್‌ಗಳಾದ ಅವನಿ ಪ್ರಶಾಂತ್, ರಿಷಿಕಾ ಮುರಳೀಧರ್, ಜಿ.ಎನ್.ಬಸವರಾಜು, ಗಗನ್ ವಿನೋದ್ ಮತ್ತು ಮೈಸೂರಿನ ವಿಧಾತ್ರಿ ಅರಸ್ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.