ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೈವಿಂಗ್‌: ಚಿನ್ನ ಗೆದ್ದ ಲಂಡನ್‌ ಸಿಂಗ್

ರಾಷ್ಟ್ರೀಯ ವಾಟರ್‌ ಪೋಲೊ; ಕರ್ನಾಟಕಕ್ಕೆ ನಿರಾಶೆ
Published 23 ಜೂನ್ 2023, 16:07 IST
Last Updated 23 ಜೂನ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ಸರ್ವಿಸಸ್ ತಂಡದ ಸಾಹಸಿಗಳು  ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಡೈವಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದರು. 

ಪುರುಷರ ವಿಭಾಗದ ಒಂದು ಮೀಟರ್ ಸ್ಪ್ರಿಂಗ್‌ ಬೋರ್ಡ್ ಡೈವಿಂಗ್‌ನಲ್ಲಿ ಸರ್ವಿಸಸ್‌ನ ಎಚ್‌. ಲಂಡನ್ ಸಿಂಗ್ ಮೊದಲ ಸ್ಥಾನ ಗಳಿಸಿದರು. 348.40 ಅಂಕಗಳೊಂದಿಗೆ ಚಿನ್ನ ಗೆದ್ದರು.

ಅದೇ ತಂಡದ ಸುರಜೀತ್ ರಾಜಬನ್ಷಿ (309.95) ಮತ್ತು ಉತ್ತರಪ್ರದೇಶದ ಸತೀಶಕುಮಾರ್ ಪ್ರಜಾಪತಿ (303.95) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ವರುಣ್ ಸತೀಶ್ ಪೈ (193.95 ) ಹಾಗೂ ಆಶಿತೋಷ್ ಬಿಲ್‌ಗೋಜಿ (97.40) ಕ್ರಮವಾಗಿ  11 ಮತ್ತು 19ನೇ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ ಒಂದು ಮೀಟರ್ ಸ್ಪ್ರಿಂಗ್ ಬೋರ್ಡ್‌ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ಪಲಕ್ ಶರ್ಮಾ ಚಿನ್ನ ಗೆದ್ದರು. 171.30 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರು. ಈ ಚಾಂಪಿಯನ್‌ಷಿಪ್‌ನಲ್ಲಿ ಅವರು ಗಳಿಸಿದ ಎರಡನೇ ಪದಕ ಇದಾಗಿದೆ.

ರೈಲ್ವೆಯ ಹೃತಿಕಾ ಶ್ರೀರಾಮ್ (164.35) ಮತ್ತು ಮಹಾರಾಷ್ಟ್ರದ ಮೆಧಾಲಿ ರೇಡ್ಕರ್ (161.55) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಪ್ರಶಸ್ತಿ ಗಳಿಸಿದರು.

ಕರ್ನಾಟಕದ ಚೈತ್ರಾ ಎಸ್ ಪ್ರಸಾದ್ (99.90) ಹಾಗೂ ಶಖೈನಾ ಜೆ ರಾವ್ (91.05) 10 ಮತ್ತು 11ನೇ ಸ್ಥಾನಗಳನ್ನು ಪಡೆದರು.

ವಾಟರ್‌ ಪೋಲೊನಲ್ಲಿ ನಿರಾಶೆ

ಆತಿಥೇಯ ಕರ್ನಾಟಕದ ಪುರುಷ ಹಾಗೂ ಮಹಿಳಾ ತಂಡಗಳು ಬಸವನಗುಡಿ ಈಜುಕೇಂದ್ರದಲ್ಲಿ ನಡೆಯುತ್ತಿರುವ ವಾಟರ್‌ ಪೋಲೊ ಚಾಂಪಿಯನ್‌ಷಿಪ್‌ನಲ್ಲಿ ನಿರಾಶೆ ಅನುಭವಿಸಿದವು.

ಶುಕ್ರವಾರ ಮಹಿಳೆಯರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ತಂಡವು 7–3ರಿಂದ ಕರ್ನಾಟಕವನ್ನು ಸೋಲಿಸಿತು.

ಇನ್ನುಳಿದ ಪಂದ್ಯಗಳಲ್ಲಿ ಕೇರಳ ತಂಡವು 15–0ಯಿಂದ ಅಸ್ಸಾಂ ಎದುರು, ಪೊಲೀಸ್ ತಂಡವು 16–0ಯಿಂದ ತೆಲಂಗಾಣ ವಿರುದ್ಧ; ದೆಹಲಿ ತಂಡವು 6–1ರಿಂದ ತಮಿಳುನಾಡು ಎದುರು ಜಯಿಸಿದವು.

ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ತಂಡವು 9–4ರಿಂದ ಕರ್ನಾಟಕವನ್ನು ಸೋಲಿಸಿತು.

ಇನ್ನುಳಿದ ಪಂದ್ಯಗಳಲ್ಲಿ ರೈಲ್ವೆ ತಂಡವು 6–4ರಿಂದ ಕೇರಳ ಎದುರು; ಸರ್ವಿಸಸ್ 5–3ರಿಂದ ಬಂಗಾಲ ಎದುರು; ಪೊಲೀಸ್ ತಂಡವು 6–0ಯಿಂದ ತೆಲಂಗಾಣ ವಿರುದ್ಧ; ಪಂಜಾಬ್ 10–0ಯಿಂದ ಅಸ್ಸಾಂ ಎದುರು ಜಯಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT