ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ಅಥ್ಲೆಟಿಕ್ಸ್: ಫೈನಲ್‌ಗೆ ಶಾರೂಕ್ ಖಾನ್

Published : 29 ಆಗಸ್ಟ್ 2024, 13:30 IST
Last Updated : 29 ಆಗಸ್ಟ್ 2024, 13:30 IST
ಫಾಲೋ ಮಾಡಿ
Comments

ಲಿಮಾ: ಭಾರತದ ಶಾರೂಕ್ ಖಾನ್ ಅವರು 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್‌ ಪುರುಷರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಫೈನಲ್ ಪ್ರವೇಶಿಸಿದರು. ಹೀಟ್ಸ್‌ನಲ್ಲಿ ಆರನೇ ಸ್ಥಾನ ಪಡೆದ ಖಾನ್ ರಾಷ್ಟ್ರೀಯ ದಾಖಲೆಯನ್ನೂ ಮುರಿದರು. 

ಬುಧವಾರ ತಡರಾತ್ರಿ ನಡೆದ ಹೀಟ್ಸ್‌ನಲ್ಲಿ  18 ವರ್ಷದ ಖಾನ್, 8 ನಿಮಿಷ, 45.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಫೈನಲ್ ಸುತ್ತು ಶನಿವಾರ ನಡೆಯಲಿದೆ. 

ಭುವನೇಶ್ವರದಲ್ಲಿ ಕಳೆದ ಮೇನಲ್ಲಿ ನಡೆದಿದ್ದ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ರಾಜಸ್ಥಾನದ ರಾಜೇಶ್ ಅವರು 8ನಿ,50.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಮಾಡಿದ್ದರು. ಅದನ್ನು ಖಾನ್ ಮೀರಿನಿಂತರು. ಕೊರಿಯಾದಲ್ಲಿ ಹೋದ ವರ್ಷದ  ಜೂನ್ ತಿಂಗಳಿನಲ್ಲಿ ನಡೆದಿದ್ದ ಏಷ್ಯನ್ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಖಾನ್ 8ನಿ, 51.75ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಅವರ ಇದುವರೆಗಿನ ವೈಯಕ್ತಿಕ ಶ್ರೇಷ್ಠ ದಾಖಲೆಯಾಗಿತ್ತು. 

ಭಾರತದ ಮತ್ತೊಬ್ಬ ಅಥ್ಲೀಟ್ ಜಯಕುಮಾರ್ ಅವರು ಪುರುಷರ 400 ಮೀ ಓಟದ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು. ಸೆಮಿಫೈನಲ್ ಹೀಟ್‌ನಲ್ಲಿ ಅವರು ಮೂರನೇ ಸ್ಥಾನ (46.96ಸೆ) ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT