ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Arctic Open: ಪಿ.ವಿ. ಸಿಂಧು ಸೆಮಿಫೈನಲ್‌ಗೆ ಲಗ್ಗೆ

Published 14 ಅಕ್ಟೋಬರ್ 2023, 5:47 IST
Last Updated 14 ಅಕ್ಟೋಬರ್ 2023, 5:47 IST
ಅಕ್ಷರ ಗಾತ್ರ

ವಾಂತಾ (ಫಿನ್ಲೆಂಡ್): ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ. ಸಿಂಧು, ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಎಂಟನೇ ಶ್ರೇಯಾಂಕಿತೆ ಸಿಂಧು ಅವರು ವಿಯೆಟ್ನಾಂನ ಥುಯ್ ಲಿನ್ ನ್ಯುಯೆನ್ ವಿರುದ್ಧ 20-22, 22-20, 21-18ರ ಅಂತರದ ಗೆಲುವು ಸಾಧಿಸಿದರು.

ಮೊದಲ ಸೆಟ್‌ನಲ್ಲಿ ಹಿಂದೆ ಬಿದ್ದರೂ ಪುಟಿದೆದ್ದ ಸಿಂಧು, ಅಮೋಘ ಆಟದ ಮೂಲಕ 91 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ವಿರುದ್ಧ ಮೇಲುಗೈ ಸಾಧಿಸಿದರು.

ಪ್ರಸಕ್ತ ಋತುವಿನಲ್ಲಿ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಹುಡುಕಾಟದಲ್ಲಿರುವ ಸಿಂಧು ಅವರು, ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ ಐದನೇ ಶ್ರೇಯಾಂಕಿತೆ ಚೀನಾದ ಝಿ ಯಿ ಸವಾಲನ್ನು ಎದುರಿಸಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಇತ್ತೀಚೆಗೆ ಅಂತ್ಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT