ಲಖನೌ: ಒಲಿಂಪಿಕ್ ಪದಕ ವಿಜೇತೆಸಾಕ್ಷಿ ಮಲಿಕ್ ಅವರನ್ನುಕಳೆದ 2 ತಿಂಗಳಿಂದೀಚೆಗೆ ಸತತಎರಡು ಬಾರಿ ಮಣಿಸಿದ ಯುವ ಕುಸ್ತಿಪಟು ಸೋನಮ್ ಮಲಿಕ್, ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಕುಸ್ತಿ ಕ್ವಾಲಿಫೈಯರ್ಸ್‌ನಲ್ಲಿ ಭಾಗವಹಿಸುವ ಭಾರತ ತಂಡವನ್ನು ಕೂಡಿಕೊಂಡರು.

ಇತ್ತೀಚೆಗೆ ಮುಕ್ತಾಯವಾದ ರೋಂ ರ‍್ಯಾಂಕಿಂಗ್‌ಸಿರೀಸ್ ಮತ್ತು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆ ತೋರಲು ವಿಫಲವಾಗಿದ್ದ 18ವರ್ಷ ಸೋನಮ್ ಅವರಿಗೆ, ಮತ್ತೊಮ್ಮೆ62ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಸೂಚಿಸಲಾಗಿತ್ತು.

ಸೋನಮ್ ಅವರು, ಸಾಕ್ಷಿ ವಿರುದ್ಧ ಸೆಣಸುವುದಕ್ಕೂ ಮೊದಲು ಏಷ್ಯನ್ ಚಾಂಪಿಯನ್‌ಷಿಪ್ ಚಿನ್ನ ಪದಕ ವಿಜೇತೆ ಸರೀತಾ ಮೊರ್ ಅವರನ್ನು 3–1 ಅಂತರದಿಂದ ಮಣಿಸಿದ್ದರು.

ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ಸ್ ಟೂರ್ನಿಯು ಮಾರ್ಚ್ 27 ರಿಂದ 29ರವರೆಗೆ ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ನಡೆಯಲಿದೆ. ಇದರಲ್ಲಿ ಫೈನಲ್ ಪ್ರವೇಶಿಸಿದವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪೂಜಾ ಧಂಡ ಸೇರಿದಂತೆಒಂಬತ್ತು ಮಂದಿ ಕುಸ್ತಿಪಟುಗಳು62 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದರು.

ಹಣಾಹಣಿಯೊಂದರಲ್ಲಿ ಎದುರಾಳಿಯನ್ನು ಚಿತ್ ಮಾಡಲು ಮೇಲೆತ್ತಿರುವ ಸೋನಮ್ ಮಲಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.