ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪೀಡ್‌ ಚೆಸ್ ಟೂರ್ನಿ ಫೈನಲ್‌ನಲ್ಲಿ ಸೋತ ಹಾರಿಕಾ

Published 24 ನವೆಂಬರ್ 2023, 0:17 IST
Last Updated 24 ನವೆಂಬರ್ 2023, 0:17 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಹಾರಿಕಾ ಅವರು ಜೂಲಿಯಸ್‌ ಬೇಯ ಮಹಿಳಾ ಆನ್‌ಲೈನ್‌ ಸ್ಪೀಡ್‌ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ರನ್ನರ್ ಅಪ್ ಸ್ಥಾನ ಪಡೆದರು. ಅವರು ಫೈನಲ್‌ನಲ್ಲಿ ಚೀನಾದ ಹೌ ಯಿಫಾನ್ ಅವರಿಗೆ 11–15ರಲ್ಲಿ ಮಣಿದರು.

ಹಾರಿಕಾ ಅವರು ತಾವು ಗೆದ್ದ ಪಂದ್ಯಗಳಿಗಾಗಿ ₹3.52 ಲಕ್ಷ ಬಹುಮಾನ ಪಡೆದರು. ‘ನಾನು ಇಂದು ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಬೆನ್ನುಬೆನ್ನಿಗೆ ಪಂದ್ಯಗಳನ್ನುಆಡಬೇಕಾಗಿತ್ತು. ತುಂಬಾ ದಣಿದಿದ್ದೆ’ ಎಂದು ಟೂರ್ನಿಯ ನಂತರ ಹಾರಿಕಾ
ಪ್ರತಿಕ್ರಿಯಿಸಿದರು.

ಹಾರಿಕಾ ಸೆಮಿಫೈನಲ್‌ನಲ್ಲಿ 12–10 ರಿಂದ ಕ್ಯಾತರಿನಾ ಲಾಗ್ನೊ (ರಷ್ಯಾ) ಅವರನ್ನು ಸೋಲಿಸಿದ್ದರು.

ಅಗ್ರಸ್ಥಾನ ಪಡೆದ ಹೌ ಬಹುಮಾನವಾಗಿ 8.33 ಲಕ್ಷ ಚೆಕ್‌ ಪಡೆದರು. ಹೆಚ್ಚಿನ ಶೇಕಡವಾರು ಗೆಲುವಿಗಾಗಿ ₹4.80 ಲಕ್ಷ ಬಹುಮಾನ ಪಡೆದರು. ಮೊದಲ ನಾಲ್ಕು ಪಂದ್ಯಗಳಲ್ಲೇ ಹೌ ಅವರು ಮೂರು ಪಾಯಿಂಟ್‌ ಲೀಡ್ ಪಡೆದರು. ಅವರ ಎದುರಾಳಿ ನಂತರ ಎರಡು ಪಂದ್ಯಗಳನ್ನು ಗೆದ್ದರೂ, ಒಟ್ಟಾರೆ ಹೌ ಮುನ್ನಡೆಗೆ ಸಮಸ್ಯೆಯಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT