ನವದೆಹಲಿ: ಭಾರತದ ಅಭಯ್ ಸಿಂಗ್ ಅವರು ಟೊರೊಂಟೊದಲ್ಲಿ ನಡೆದ ಗುಡ್‌ಫೆಲೋ ಕ್ಲಾಸಿಕ್ ಸ್ಕ್ವಾಷ್ ಚಾಲೆಂಜರ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ 11-7, 11-9, 11-9 ರಿಂದ ವೇಲ್ಸ್‌ನ ಎಲಿಯಟ್ ಮೋರಿಸ್ ದೇವ್ರೆಡ್ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಅಭಯ್ ಎಂಟನೇ ಪಿಎಸ್‌ಎ ಪ್ರಶಸ್ತಿ ಯನ್ನು ಗೆದ್ದುಕೊಂಡರು.

ಅಗ್ರ ಶ್ರೇಯಾಂಕದ 25 ವರ್ಷದ ಭಾರತದ ಆಟಗಾರ 40 ನಿಮಿಷಗಳಲ್ಲಿ ಗೆಲುವು ಪಡೆದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 66ನೇ ಸ್ಥಾನದಲ್ಲಿರುವ ಅವರು ಕಳೆದ ತಿಂಗಳು ಮುಂಬೈನಲ್ಲಿ ನಡೆದ ಜೆಎಸ್‌ಡಬ್ಲ್ಯು ವಿಲಿಂಗ್ಡನ್ ಟೂರ್ನಿಯಲ್ಲೂ ಚಾಂಪಿಯನ್ ಆಗಿದ್ದರು. ಅಲ್ಲದೆ, ಹಾಂಗ್‌ಝೌ ಏಷ್ಯನ್ ಗೇಮ್ಸ್‌ನ ತಂಡ ವಿಭಾಗದಲ್ಲಿ ಚಿನ್ನ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.