ಧಾರವಾಡ: ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ 10 ಕಿ.ಮೀ ಓಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬೆಳಗಾವಿಯ ಶಿವಾನಂದ ನಾಯಕ್ ಅವರು 29 ನಿಮಿಷ 20 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹಾಗೂ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ರಾಶಿ ಸಿ.ಎಂ ಅವರು 38 ನಿಮಿಷ 44 ಸೆಕೆಂಡ್‌ಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ ಧಾರವಾಡದ ಚೇತನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ವೇತಾ ಪ್ರಥಮ ಸ್ಥಾನ ಪಡೆದಿದ್ದಾರೆ.
ಫಲಿತಾಂಶಗಳು:10 ಕಿ.ಮೀ –ಪುರುಷರ ವಿಭಾಗ: ಶಿವಾನಂದ ನಾಯಕ್ (ಬೆಳಗಾವಿ) 1, ನಾಗರಾಜ್ ದಿವಟೆ (ಹುಬ್ಬಳ್ಳಿ) 2 , ವೆಂಕಟೇಶ್ ಕೆ.ಕೆ (ಬೆಂಗಳೂರು) 3, ಪ್ರಭು ಲಮಾಣಿ (ಬೆಂಗಳೂರು) 4, ಸಂಗಮೇಶ್ ಹಳ್ಳಿ (ಬಾಗಲಕೋಟೆ) 5, ಸಂಜು ಬೆಟ್ಟಪ್ಪನವರ (ಹಾವೇರಿ) 6ನೇ ಸ್ಥಾನ.
ಮಹಿಳಾ ವಿಭಾಗ: ರಾಶಿ ಸಿ.ಎಂ (ಬೆಂಗಳೂರು) 1, ಶಿಲ್ಪಾ ಹೊಸಮನಿ (ಧಾರವಾಡ) 2, ಎಚ್.ವಿ.ದೀಕ್ಷಾ (ಶಿವಮೊಗ್ಗ) 3, ಸುಶ್ಮಿತಾ ಮುಗಳಿ (ಧಾರವಾಡ) 4, ಸುಪ್ರಿತಾ ಸಿದ್ದಿ (ಧಾರವಾಡ) 5, ವಿಜಯಲಕ್ಷ್ಮಿ ಕರಿಲಿಂಗಣ್ಣವರ (ಧಾರವಾಡ) 6ನೇ ಸ್ಥಾನ.
4 ಕಿ.ಮಿ. –ಬಾಲಕರ ವಿಭಾಗ (16 ವರ್ಷದೊಳಗಿ ನವರು): ಚೇತನ್ ದೊಡ್ಡಮನಿ 1, ರಾಮನಗೌಡ ಪಾಟೀಲ2, ವೀರನಗೌಡ ಪಾಟೀಲ 3, ಕಾರ್ತಿಕ್ ತೊಡಳ್ಳಿ 4, ಬಸವರಾಜ ರಾಮಶೆಟ್ಟಿ 5, ಉಮೇಶ್ ರಾಥೋಡ್ 6ನೇ ಸ್ಥಾನ (ಎಲ್ಲರೂ ಧಾರವಾಡದವರು).
ಬಾಲಕಿಯರ ವಿಭಾಗ: ಶ್ವೇತಾ ಬಡಿಗೇರ (ಧಾರವಾಡ) 1, ಲಕ್ಷ್ಮಿ ಗೊಣದಿನ್ನಿ (ಧಾರವಾಡ) 2, ಪ್ರೀತಿ ಬಿ. ಅಮಟಿ (ಹುಬ್ಬಳ್ಳಿ) 3, ಚೈತ್ರಾ ಎಂ ಪುಟ್ಟಣ್ಣನವರ (ಹುಬ್ಬಳ್ಳಿ) 4, ಪೃಥ್ವಿ ಎಚ್. ಪೂಜಾರ್ (ಧಾರವಾಡ) 5, ಹಾಗೂ ಲಕ್ಷ್ಮಿ ಬಿ.ಓಬಣ್ಣವರ (ಧಾರವಾಡ) 6ನೇ ಸ್ಥಾನ ಪಡೆದಿದ್ದಾರೆ.