ಹಾಂಗ್‌ಝೌ: ಭಾರತದ ರಾಮ್ ಬಾಬೂ ಹಾಗೂ ಮಂಜು ರಾಣಿ ಅವರು ಏಷ್ಯನ್ ಕ್ರೀಡಾಕೂಟದ 35 ಕಿ.ಮೀ. ರೇಸ್ ವಾಕ್ ಮಿಶ್ರ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.
ಈ ಜೋಡಿ 5 ಗಂಟೆ 51.14 ನಿಮಿಷದಲ್ಲಿ ಗುರಿ ಮುಟ್ಟಿತು. ರಾಮ್ 2 ಗಂಟೆ 42.11 ನಿಮಿಷದಲ್ಲಿ ಕ್ರಮಿಸಿದರೆ, ರಾಣಿ 3 ಗಂಟೆ 9.03 ನಿಮಿಷದಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು.
ಚೀನಾ (5 ಗಂಟೆ 16.41 ನಿಮಿಷ) ಹಾಗೂ ಜಪಾನ್ (5 ಗಂಟೆ 22.11ನಿಮಿಷ) ಜೋಡಿಗಳು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿವೆ.
ರಾಮ್ ಹಾಗೂ ರಾಣಿ ಗಳಿಸಿದ ಪದಕವು, ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ದೊರೆತ 70ನೇ ಪದಕ. ಈ ಸ್ಪರ್ಧೆ ಮುಗಿದ ಕೆಲವೇ ಹೊತ್ತಿನಲ್ಲಿ ಆರ್ಚರಿ ಸ್ಪರ್ಧೆಯ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ಭಾರತದ ಜೋಡಿ ಚಿನ್ನ ಗೆದ್ದಿದ್ದು, ಪದಕ ಗಳಿಕೆ ಸಂಖ್ಯೆ 71ಕ್ಕೆ ಏರಿದೆ.
2018ರಲ್ಲಿ ಇಂಡೊನೇಷ್ಯಾದಲ್ಲಿ ನಡೆದಿದ್ದ ಕೂಟದಲ್ಲಿ 70 ಪದಕ ಗಳಿಸಿದ್ದು ಭಾರತದ ಶ್ರೇಷ್ಠ ಸಾಧನೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.