ಫುಕುವೊಕಾ (ಜಪಾನ್): ಭಾರತದ ಈಜುತಾರೆ ಶ್ರೀಹರಿ ನಟರಾಜ್, ಫಿನಾ ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಗುರುವಾರ ನಿರಾಶೆ ಅನುಭವಿಸಿದರು. 39 ಮಂದಿಯಿದ್ದ ಈ ಸ್ಪರ್ಧೆಯಲ್ಲಿ 21 ವರ್ಷದ ಈಜುಪಟು 31ನೇ ಸ್ಥಾನ ಪಡೆದರು.
ಕನ್ನಡಿಗ ಶ್ರೀಹರಿ ನಿಗದಿತ ದೂರವನ್ನು 2ನಿ.04.42 ಸೆ.ಗಳಲ್ಲಿ ಪೂರೈಸಿದರು. ಸ್ಪರ್ಧೆಯಲ್ಲಿ ಮೊದಲ 16 ಸ್ಥಾನ ಪಡೆದವರು ಮಾತ್ರ ಸೆಮಿಫೈನಲ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.
ಈ ಸ್ಪರ್ಧೆಯಲ್ಲಿ ಶ್ರೀಹರಿ ಅವರ ಉತ್ತಮ ಸಾಧನೆ 2ನಿ.00.82 ಸೆ. ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಈ ಸಾಧನೆ ದಾಖಲಿಸಿದ್ದರು.
ಕಳೆದ ವಾರ ನಡೆದ ಇದೇ ಕೂಟದ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲೂ ಶ್ರೀಹರಿ 31ನೇ ಸ್ಥಾನ ಪಡೆದಿದ್ದರು. ಅವರು ಭಾನುವಾರ ನಡೆಯುವ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲೂ ಕಣಕ್ಕಿಳಿಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.