ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಹರಿ, ಅನೀಶ್‌ ಕೂಟ ದಾಖಲೆ

ಈಜು: ಆತಿಥೇಯ ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ
Published : 23 ಆಗಸ್ಟ್ 2024, 14:34 IST
Last Updated : 23 ಆಗಸ್ಟ್ 2024, 14:34 IST
ಫಾಲೋ ಮಾಡಿ
Comments

ಬೆಂಗಳೂರು: ಒಲಿಂಪಿಯನ್‌ ಶ್ರೀಹರಿ ನಟರಾಜ್‌ ಅವರು ಬಸವನಗುಡಿ ಈಜುಕೇಂದ್ರದಲ್ಲಿ ಶುಕ್ರವಾರ ಮುಕ್ತಾಯಗೊಂಡ ಎನ್‌ಆರ್‌ಜೆ ರಾಜ್ಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ಎರಡು ವಿಭಾಗಗಳ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದರು. ಆತಿಥೇಯ ಬಿಎಸಿ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಡಾಲ್ಫಿನ್ ಅಕ್ವಾಟಿಕ್ಸ್‌ನ 23 ವರ್ಷದ ಈಜುಪಟು ಶ್ರೀಹರಿ ಇಲ್ಲಿ ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ 23.42 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ 2023ರಲ್ಲಿ ತನೀಷ್ ಜಾರ್ಜ್ ಮ್ಯಾಥ್ಯೂ (23.71ಸೆ) ಅವರ ದಾಖಲೆಯನ್ನು ಹಿಂದಿಕ್ಕಿದರು. 100 ಮೀ. ಫ್ರೀಸ್ಟೈಲ್‌ನಲ್ಲಿ ಅವರು 50.67 ಸೆಕೆಂಡ್‌ ಸಾಧನೆಯೊಂದಿಗೆ 2021ರಲ್ಲಿ ತಾವೇ ನಿರ್ಮಿಸಿದ್ದ ದಾಖಲೆಯನ್ನು ( 51.36 ಸೆ) ಸುಧಾರಿಸಿಕೊಂಡರು.

ಬಿಎಸಿಯ ಅನೀಶ್‌ ಎಸ್‌. ಗೌಡ ಅವರು ಪುರುಷರ 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ 4 ನಿ.01.89 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ, 2021ರಲ್ಲಿ ಅವರೇ ನಿರ್ಮಿಸಿದ್ದ ದಾಖಲೆಯನ್ನು (4 ನಿ.04.76ಸೆ) ಬಲಪಡಿಸಿಕೊಂಡರು.

ಬಿಎಸಿಯ ಅನೀಶ್ ಎಸ್. ಗೌಡ ಮತ್ತು ಶಿರಿನ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವೈಯಕ್ತಿಕ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದರು. ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿದ ಬಿಎಸಿ 507 ಪಾಯಿಂಟ್ಸ್‌ ಗಳಿಸಿದರೆ, ಡಾಲ್ಫಿನ್‌ 253 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.

ಫಲಿತಾಂಶ (ಚಿನ್ನ ಗೆದ್ದವರು ಮಾತ್ರ): ಪುರುಷರು: 50 ಮೀ. ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಡಿಎ, 23.42 ಸೆ. ಕೂಟ ದಾಖಲೆ) 

100 ಮೀ. ಫ್ರೀಸ್ಟೈಲ್: ಶ್ರೀಹರಿ ನಟರಾಜ್ (ಡಿಎ, 50.67 ಸೆ. ಕೂಟ ದಾಖಲೆ). 400 ಮೀ. ಫ್ರೀಸ್ಟೈಲ್: ಅನೀಶ್ ಎಸ್. ಗೌಡ (ಬಿಎಸಿ, 4 ನಿ.01.89 ಸೆ, ಕೂಟ ದಾಖಲೆ). 50 ಮೀ. ಬ್ಯಾಕ್‌ಸ್ಟ್ರೋಕ್: ಆಕಾಶ್ ಮಣಿ (ಬಿಎಸಿ, 26.29 ಸೆ). 100 ಮೀ. ಬ್ಯಾಕ್‌ಸ್ಟ್ರೋಕ್‌: ಆಕಾಶ್‌ ಮಣಿ (ಬಿಎಸಿ, 56.95 ಸೆ). 200 ಮೀ. ಬ್ಯಾಕ್‌ಸ್ಟ್ರೋಕ್‌:ಮಣಿಕಂಠ ಎಲ್‌ (ಬಿಎಸಿ, 2 ನಿ.23.50 ಸೆ). 100 ಮೀ. ಬಟರ್‌ಫ್ಲೈ: ಕಾರ್ತಿಕೇಯನ್ ನಾಯರ್ (ಡಿಎ, 55.78 ಸೆ). 200 ಮೀ. ಮಿಡ್ಲೆ: ಶಿವ ಎಸ್‌ (ಬಿಎಸಿ, 2ನಿ. 10.73 ಸೆ). 4x100 ಮೀ. ಮೆಡ್ಲೆ ರಿಲೆ: ಡಾಲ್ಫಿನ್ ಅಕ್ವಾಟಿಕ್ಸ್ (3 ನಿ.52.57ಸೆ., ಕೂಟ ದಾಖಲೆ)

ಮಹಿಳೆಯರು: 50 ಮೀ. ಫ್ರೀಸ್ಟೈಲ್‌: ಶಾಲಿನಿ ಆರ್‌. ದೀಕ್ಷಿತ್‌ (ಡಿಎ, 27.72 ಸೆ). 100 ಮೀ. ಫ್ರೀಸ್ಟೈಲ್‌: ಶಿರಿನ್‌ (ಬಿಎಸಿ, 1 ನಿ.00.22 ಸೆ). 400 ಮೀ. ಫ್ರೀಸ್ಟೈಲ್‌: ಶಿರಿನ್‌ (ಬಿಎಸಿ (4 ನಿ.34.92 ಸೆ). 50 ಮೀ. ಬ್ಯಾಕ್ ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ, 31.18 ಸೆ). 100 ಮೀ. ಬ್ಯಾಕ್ ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ, 1 ನಿ.07.46 ಸೆ). 200 ಮೀ. ಬ್ಯಾಕ್ ಸ್ಟ್ರೋಕ್: ಎಸ್‌. ಲಕ್ಷ್ಯಾ (ಐಐಎಸ್‌, 2 ನಿ.46.31 ಸೆ). 100 ಮೀ. ಬಟರ್‌ಫ್ಲೈ: ಸುಹಾಸಿನಿ ಘೋಷ್‌ (ಡಿಎ, 1 ನಿ.06.77 ಸೆ). 200 ಮೀ. ಬಟರ್‌ಫ್ಲೈ: ಮಾನವಿ ವರ್ಮ (ಡಿಎ, 2 ನಿ.27.14 ಸೆ). 4x400 ಮೀ. ಮಿಡ್ಲೆ ರಿಲೆ‌: ಡಾಲ್ಫಿನ್‌ ಅಕ್ವಾಟಿಕ್ಸ್‌ (4ನಿ. 37.28ಸೆ)

ವೈಯಕ್ತಿಕ ಚಾಂಪಿಯನ್‌ಷಿಪ್‌: ಪುರುಷರು: ಅನೀಶ್‌ ಎಸ್‌. ಗೌಡ (ಬಿಎಸಿ, 40 ಪಾಯಿಂಟ್ಸ್‌), ಮಹಿಳೆಯರು: ಶಿರಿನ್‌ (ಬಿಎಸಿ, 33 ಪಾಯಿಂಟ್ಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT