ಸಾರ್ಬ್ರೂಕನ್, ಜರ್ಮನಿ: ಉತ್ತಮ ಆಟ ಮುಂದುವರಿಸಿದ ಭಾರತದ ಕಿದಂಬಿ ಶ್ರೀಕಾಂತ್ ಅವರು ಹೈಲೊ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ.

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ಶ್ರೀಕಾಂತ್21-13, 21-19ರಿಂದ ಇಂಡೊನೇಷ್ಯಾದ ಜೋನಾಥನ್ ಕ್ರಿಸ್ಟಿ ಅವರನ್ನು ಪರಾಭವಗೊಳಿಸಿದರು. ಐದು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಶ್ರೀಕಾಂತ್, 39 ನಿಮಿಷಗಳಲ್ಲಿ ಎದುರಾಳಿಯನ್ನು ಮಣಿಸಿದರು.

ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತದ ಆಟಗಾರ, ವಿಶ್ವ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನದಲ್ಲಿರುವ ಜೊನಾಥನ್ ಎದುರಿನ ಗೆಲುವಿನ ದಾಖಲೆಯನ್ನು 6–5ಕ್ಕೆ ಹೆಚ್ಚಿಸಿಕೊಂಡರು. ಶ್ರೀಕಾಂತ್ ಅವರು ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿದ್ದಾರೆ.

2021ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಶ್ರೀಕಾಂತ್, ಸೆಮಿಫೈನಲ್ನಲ್ಲಿ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ ಗಿಂಟಿಂಗ್ ಅವರನ್ನು ಎದುರಿಸುವರು. ಆ್ಯಂಟನಿ ಎದುರು ಈ ಹಿಂದೆ ಆಡಿದ ಐದು ಪಂದ್ಯಗಳ ಪೈಕಿ ಶ್ರೀಕಾಂತ್ ಎರಡರಲ್ಲಿ ಗೆದ್ದಿದ್ದಾರೆ. ಮೂರು ಪಂದ್ಯಗಳನ್ನು ಇಂಡೊನೇಷ್ಯಾ ಆಟಗಾರ ಜಯಿಸಿದ್ದಾರೆ.

ಶುಕ್ರವಾರ ತ್ರಿಶಾ– ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.