ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಟೈ ಪಂದ್ಯದಲ್ಲಿ ಪಟ್ನಾ, ಡೆಲ್ಲಿ

Published 14 ಜನವರಿ 2024, 17:31 IST
Last Updated 14 ಜನವರಿ 2024, 17:31 IST
ಅಕ್ಷರ ಗಾತ್ರ

ಜೈಪುರ: ಪ್ರೊ ಕಬಡ್ಡಿ ಲೀಗ್‌ನ ರೋಚಕ ಪಂದ್ಯದಲ್ಲಿ ಕೊನೆಗಳಿಗೆಯಲ್ಲಿ ಹಿನ್ನಡೆಯಿಂದ ಪುಟಿದೆದ್ದ ಪಟ್ನಾ ಪೈರೇಟ್ಸ್‌ ತಂಡ 39–39 ರಿಂದ  ದಬಂಗ್‌ ಡೆಲ್ಲಿ ವಿರುದ್ಧ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಪಟ್ನಾ ತಂಡದ ಸಚಿನ್ ಕೊನೆಯ ಐದು ನಿಮಿಷಗಳಲ್ಲಿ ಗಳಿಸಿದ ಆರು ಪಾಯಿಂಟ್‌ಗಳು ಇದಕ್ಕೆ ಕಾರಣವಾಯಿತು.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಲೀಗ್‌ನ (ಇದುವರೆಗೆ ಪಿಕೆೆಎಲ್‌ನ 999ನೇ) ಪಂದ್ಯದಲ್ಲಿ ಡೆಲ್ಲಿ ತಂಡ ವಿರಾಮದ ವೇಳೆಗೆ 20–14 ಪಾಯಿಂಟ್‌ಗಳಿಂದ ಮುಂದಿತ್ತು. ಡೆಲ್ಲಿ ಪರ ರೈಡರ್‌ ಆಶು ಮಲಿಕ್ 14 ಪಾಯಿಂಟ್ಸ್ ಗಳಿಸಿ ಮಿಂಚಿದರು. ಪಟ್ನಾ ಪರ ಮಂಜಿತ್ ಮತ್ತು ಸಚಿನ್‌ ‘ಸೂಪರ್‌ ಟೆ‌ನ್‌’ (ತಲಾ ಹತ್ತು ಪಾಯಿಂಟ್ಸ್) ಗಳಿಸಿದರು. ಐದು ನಿಮಿಷ ಉಳಿದಿದ್ದಾಗ ಡೆಲ್ಲಿ 37–29 ಪಾಯಿಂಟ್‌ಗಳಿಂದ ಮುಂದಿತ್ತು. ಆದರೆ ನಂತರ ಒಂದು ಬಾರಿ ಆಲೌಟ್‌ ಆಯಿತು. ಡೆಲ್ಲಿ ತಂಡ 12 ಪಂದ್ಯಗಳಿಂದ 43 ‍ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನದಲ್ಲಿ ಮುಂದುವರಿಯಿತು. ಡೆಲ್ಲಿಗೆ ಇದು ಎರಡನೇ ಟೈ. ಪಟ್ನಾ ತಂಡ ಎಂಟನೇ ಸ್ಥಾನದಲ್ಲಿದೆ.

ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡ 36–31 ಪಾಯಿಂಟ್‌ಗಳಿಂದ (ವಿರಾಮ: 22–12) ತಮಿಳ್ ತಲೈವಾಸ್ ತಂಡವನ್ನು ಸೋಲಿಸಿತು. ಒಟ್ಟು 39 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೆ ಏರಿತು.

ವಿನಯ್ ವಿಜೇತ ತಂಡದ ಪರ ಸೂಪರ್‌ ಟೆನ್ (10 ಅಂಕ) ಗಳಿಸಿದರು. ರಣಜಿತ್ ಚಂದ್ರನ್ ಮಧ್ಯಂತರಕ್ಕೆ ಮೊದಲು ಗಾಯಾಳಾಗಿ ನಿರ್ಗಮಿಸುವ ಮೊದಲು ಏಳು ಪಾಯಿಂಟ್ಸ್ ಗಳಿಸಿದರು. ತಲೈವಾಸ್ ಪರ ರೈಡರ್‌ ಅಜಿಂಕ್ಯ ಪವಾರ್ (6) ಮತ್ತು ರಕ್ಷಣೆ ವಿಭಾಗದಲ್ಲಿ ಸಾಗರ್‌ ಐದು ಪಾಯಿಂಟ್ಸ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT