ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣ ಚೇತರಿಕೆಯತ್ತ ಪಂತ್: ಐಪಿಎಲ್‌ನಲ್ಲಿ ಆಡುವ ನಿರೀಕ್ಷೆ

Published 19 ಡಿಸೆಂಬರ್ 2023, 13:10 IST
Last Updated 19 ಡಿಸೆಂಬರ್ 2023, 13:10 IST
ಅಕ್ಷರ ಗಾತ್ರ

ದುಬೈ: ಪ್ರತಿಭಾನ್ವಿತ ಆಟಗಾರ ರಿಷಭ್ ಪಂತ್ ಅವರು ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಹತ್ತಿರ ಬರುತ್ತಿದ್ದಂತೆಯೇ ಮುಂದಿನ ಕೆಲವು ತಿಂಗಳಲ್ಲಿ ಪೂರ್ಣವಾಗಿ ಚೇತರಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಉತ್ತರಾಖಂಡದ ರೂರ್ಕಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಅವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದರು. ಆದರೆ ತೀವ್ರ ಗಾಯಗೊಂಡ ಅವರು ಈ ವರ್ಷವಿಡೀ ಕ್ರಿಕೆಟ್‌ನಿಂದ ದೂರವಿರಬೇಕಾಯಿತು.

‘ಕೆಲವು ತಿಂಗಳ ಹಿಂದೆ ಇದ್ದುದಕ್ಕಿಂತ ಈಗ ನಾನು ಬಹಳಷ್ಟು ಸುಧಾರಿಸಿಕೊಂಡಿದ್ದೇನೆ. ಪೂರ್ಣ ಗುಣಮುಖನಾಗುವ ಹಾದಿಯಲ್ಲಿದ್ದೇನೆ. ಇನ್ನು ಕೆಲವೇ ತಿಂಗಳು ಬೇಕಾಗಬಹುದು’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊದಲ್ಲಿ 26 ವರ್ಷದ ಪಂತ್‌ ಹೇಳಿದ್ದಾರೆ. ಐಪಿಎಲ್‌ ವೇಳೆಗೆ ಅವರು ಆಡಲು ಸಜ್ಜಾಗಬಹುದು ಎಂಬ ನಿರೀಕ್ಷೆಯಿದೆ.

‘ಈ ಮಧ್ಯೆ ಅಭಿಮಾನಿಗಳ ಪ್ರೀತಿಯಿಂದ ಪುಳಕಿತನಾಗಿದ್ದೇನೆ. ಮೊದಲ ಬಾರಿ ಅಭಿಮಾನಿಗಳಿಂದ ಈ ರೀತಿಯ ಪ್ರೀತಿಯನ್ನು ಕಂಡೆ. ನನ್ನ ಚೇತರಿಕೆಯಲ್ಲಿ ಅವರ ಪ್ರೀತಿಯೂ ಪಾತ್ರವಹಿಸಿದೆ’ ಎಂದಿದ್ದಾರೆ ಪಂತ್.

ಕಳೆದ ಸಾಲಿನಲ್ಲಿ ಪಂತ್ ಅವರ ಗೈರಿನಲ್ಲಿ ಡೇವಿಡ್‌ ವಾರ್ನರ್‌ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ತಂಡ ಕೊನೆಯಿಂದ ಎರಡನೇ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT