ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕ್ಸಿಂಗ್‌: ಅಮಿತ್‌, ಸಚಿನ್‌ಗೆ ಚಿನ್ನ

Published 11 ಫೆಬ್ರುವರಿ 2024, 19:44 IST
Last Updated 11 ಫೆಬ್ರುವರಿ 2024, 19:44 IST
ಅಕ್ಷರ ಗಾತ್ರ

ಸೋಫಿಯಾ, ಬಲ್ಗೇರಿಯಾ : ವಿಶ್ವ ಚಾಂಪಿಯನ್‌ಷಿಪ್‌ನ ಪದಕ ವಿಜೇತ ಅಮಿತ್ ಪಂಘಲ್ ಮತ್ತು ರಾಷ್ಟ್ರೀಯ ಚಾಂಪಿಯನ್‌ ಸಚಿನ್  ಅವರು ಇಲ್ಲಿ ನಡೆಯುತ್ತಿರುವ 75ನೇ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದಾರೆ. 

2019ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಅಮಿತ್‌ (51 ಕೆಜಿ) ಅವರು ಪುರುಷರ ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ 5–0ಯಿಂದ ಕಜಕಿಸ್ತಾನದ ಸಂಜಾರ್ ತಾಷ್ಕೆನ್‌ಬೇ ವಿರುದ್ಧ ಗೆಲುವು ಸಾಧಿಸಿದರು.

ವಿಶ್ವ ಯೂತ್‌ ಚಾಂಪಿಯನ್‌ ಸಚಿನ್‌ (57 ಕೆಜಿ) ಅವರು ಫೈನಲ್‌ ಸ್ಪರ್ಧೆಯಲ್ಲಿ 5–0ಯಿಂದ ಉಜ್ಬೇಕಿಸ್ತಾನದ ಶಖ್ಜೋದ್ ಮುಜಾಫರೋವ್ ವಿರುದ್ಧ ಜಯ ಪಡೆದರು.

ಹಾಲಿ ವಿಶ್ವ ಚಾಂಪಿಯನ್ ನಿಖತ್  ಝರೀನ್‌ ಅವರು 2–3ರಿಂದ ಉಜ್ಬೇಕಿಸ್ತಾನದ ಸಬೀನಾ ಬೊಬೊಕುಲೋವಾ ಅವರಿಗೆ ಸೋತರು. ಇದರೊಂದಿಗೆ ತನ್ನ ಮೂರನೇ ಸ್ಟ್ರಾಂಡ್ಜಾ ಚಿನ್ನದ ಪದಕವನ್ನು ತಪ್ಪಿಸಿಕೊಂಡರು. 

ನಂತರ ಅರುಂಧತಿ ಚೌಧರಿ (66 ಕೆಜಿ), ಬರುನ್ ಸಿಂಗ್ ಶಗೋಲ್ಶೆಮ್ (48 ಕೆಜಿ) ಮತ್ತು ರಜತ್ (67 ಕೆಜಿ) ತಮ್ಮ ಬೌಟ್‌ಗಳಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಭಾರತವು ಎರಡು ಚಿನ್ನ, ನಾಲ್ಕು ಬೆಳ್ಳಿ ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT