ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಓಪನ್: ನಗಾಲ್‌ಗೆ ನೇರ ಪ್ರವೇಶ

Published 24 ಜನವರಿ 2024, 23:19 IST
Last Updated 24 ಜನವರಿ 2024, 23:19 IST
ಅಕ್ಷರ ಗಾತ್ರ

ಬೆಂಗಳೂರು: ಸುಮಿತ್ ನಗಾಲ್ ಅವರು ಫೆಬ್ರುವರಿ 10ರಂದು ಇಲ್ಲಿ ಆರಂಭವಾಗುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ನಿಗೆ ನೇರ ಪ್ರವೇಶ ಪಡೆದ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ.

ನಗಾಲ್ ಅವರು ಸೋಮದೇವ್‌ ದೇವ್‌ವರ್ಮನ್ ನಂತರ ಕಳೆದ ವಾರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಎರಡನೇ ಸುತ್ತನ್ನು ತಲುಪಿದ ಭಾರತದ ಎರಡನೇ ಆಟಗಾರ ಎನಿಸಿದ್ದರು. ಮೊದಲ ಸುತ್ತಿನಲ್ಲಿ ಅವರು 27ನೇ ಶ್ರೇಯಾಂಕದ ಅಲೆಕ್ಸಾಂಡರ್‌ ಬುಬ್ಲಿಕ್ ಅವರನ್ನು ಮಣಿಸಿದ್ದರು. ಬೆಂಗಳೂರು ಓಪನ್‌ಗೆ 257ರವರೆಗಿನ ಕ್ರಮಾಂಕ ‘ಕಟ್‌ಆಫ್‌’ ಆಗಿದ್ದು, 137ನೇ ಕ್ರಮಾಂಕದ ನಗಾಲ್‌ ಅವರು ಪ್ರಧಾನ ‘ಡ್ರಾ’ಗೆ ಅರ್ಹರಾದ 11 ರಾಷ್ಟ್ರಗಳ 21 ಆಟಗಾರರಲ್ಲಿ ಒಳಗೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಫ್ರಾನ್ಸ್‌ನ ಬೆಂಜಮಿನ್ ಬೊಂಝ್ (106ನೇ)ಟೂರ್ನಿಯಲ್ಲಿ ಅತಿ ಹೆಚ್ಚಿನ ರ‍್ಯಾಂಕ್‌ ಹೊಂದಿರುವ ಆಟಗಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT