ಸೋಲೊ (ಇಂಡೊನೇಷ್ಯಾ): ಭಾರತದ ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಅವರು ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಮಹಿಳೆಯರ ಸಿಂಗಲ್ಸ್ ಮೂರನೇ ಸುತ್ತಿಗೆ ಮುನ್ನಡೆದರು.

ಎರಡನೇ ಶ್ರೇಯಾಂಕದ ತನ್ವಿ ಬುಧವಾರ ಎರಡನೇ ಸುತ್ತಿನಲ್ಲಿ 21–6, 21–6 ರಿಂದ ಯುಎಇಯ ವೈದೇಹಿ ಕಾಳಿದಾಸನ್ ಅವರನ್ನು ಸೋಲಿಸಿದರು. 16 ವರ್ಷ ವಯಸ್ಸಿನ ತನ್ವಿ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.

ವೆನ್ನಲ ಕಲಗೊಟ್ಲ ಮತ್ತು ತನ್ವಿ ರೆಡ್ಡಿ ಅಂದ್ಲೂರಿ ಸಹ ಮೂರನೇ ಸುತ್ತಿಗೆ ಮುನ್ನಡೆದರು. ಕಲಗೊಟ್ಲ 21–6, 21–10 ರಿಂದ ಕಜಕಸ್ತಾನದ ಅಲಿಸಾ ಕುಲಶೋವಾ ಅವರನ್ನು, ಅಂದ್ಲೂರಿ 21–9, 21–10 ರಿಂದ ಮಕಾವುವಿನ ಉಂಗ್ ಚಿಯೊಕ್ ಇಯಾನ್ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್ನಲ್ಲಿ ಅನ್ಷ್ ನೇಗಿ ಮತ್ತು ಪ್ರಣವ್ ರಾಮ್ ನಾಗಲಿಂಗ್ ಸಹ ನೇರ ಸೆಟ್ಗಳ ಗೆಲುವಿನೊಡನೆ ಮೂರನೇ ಸುತ್ತಿಗೆ ತಲುಪಿದರು. ನೇಗಿ 21–16, 21–15 ರಿಂದ ಸಿಂಗಪುರದ ಡಿಂಗ್ ಹಾನ್ ಜಿನ್ ಅವರನ್ನು, ಪ್ರಣವ್ 21–15, 21–7 ರಿಂದ ಮ್ಯಾನ್ಮಾರ್ನ ಲಾಲ್ ಝುಯಿಡಿಕ ಅವರನ್ನು ಹಿಮ್ಮೆಟ್ಟಿಸಿದರು. ಭಾರತದ ಇಬ್ಬರಿಗೂ ಮೊದಲ ಸುತ್ತಿನಲ್ಲಿ ಬೈ ದೊರಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.