ಬೆಂಗಳೂರು: ಅದ್ಭುತ ಆಟವಾಡಿದ ಆಕಾಶ್ ಅಶೋಕ್ ಕುಮಾರ್ ಹಾಗೂ ಪ್ರೀಮಲ್ ಜೊವಾನ್ ಅವರು ರಾಜ್ಯ ಆರನೇ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಇಲ್ಲಿಯ ಚರ್ಚ್‌ಸ್ಟ್ರೀಟ್ ಅಮೀಬಾದಲ್ಲಿ ಶುಕ್ರವಾರ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್ 29 ಪಿನ್‌ಗಳಿಂದ (435–406) ಹಾಲಿ ಚಾಂಪಿಯನ್ ಕಿಶನ್ ಆರ್. ಅವರನ್ನು ಸೋಲಿಸಿದರು. ಆಕಾಶ್ ಅವರಿಗೆ ಇದು ನಾಲ್ಕನೇ ಪ್ರಶಸ್ತಿ.

ಮಹಿಳೆಯರ ವಿಭಾಗದ ಫೈನಲ್ ಹಣಾಹಣಿಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಪ್ರೀಮಲ್ ಅವರು ಗೀತಾ ಪೂಜಾರಿ ಅವರನ್ನು ಕೇವಲ 1 ಪಿನ್ ಅಂತರದಿಂದ ಮಣಿಸಿದರು. ಪ್ರೀಮಲ್ ಒಟ್ಟು 324 ಪಿನ್ ಗಳಿಸಿದರೆ, ಗೀತಾ 323 ಪಿನ್ ಕಲೆಹಾಕಿದರು. ಪ್ರೀಮಲ್ ಅವರು ಗೆದ್ದ ಮೊದಲ ಟ್ರೋಫಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.