ಬೆಂಗಳೂರು: ಬ್ಯಾಸ್ಕೆಟ್‌ಬಾಲ್ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವವಿಶ್ವದ ಪ್ರಮುಖ ಸಂಸ್ಥೆಯಾದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಸ್ಕೂಲ್ ಜೊತೆಗೂಡಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಹೊಸ ಸ್ಪರ್ಶ ನೀಡಲು ನಗರದ ದಿ ಸ್ಪೋರ್ಟ್ಸ್ ಸ್ಕೂಲ್ ನಿರ್ಧರಿಸಿದೆ. ಇದಕ್ಕಾಗಿ ಇಂಡಿಯಾ ಆನ್ ಟ್ರ್ಯಾಕ್ (ಐಒಟಿ) ಸಂಸ್ಥೆಯ ಸಹಯೋಗವನ್ನು ಪಡೆದುಕೊಂಡಿದೆ.

ಎನ್‌ಬಿಎ ಬ್ಯಾಸ್ಕೆಟ್‌ಬಾಲ್ ಸ್ಕೂಲ್ ಟ್ಯೂಷನ್ ರೂಪದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿಶ್ವದ ವಿವಿಧ ದೇಶಗಳ ಬ್ಯಾಸ್ಕೆಟ್‌ಬಾಲ್ ಸಂಸ್ಥೆಗಳ ಜೊತೆಗೂಡಿ ಪುರುಷ ಮತ್ತು ಮಹಿಳೆಯರ ತಂಡಗಳ ಏಳಿಗೆಗೆ ನೆರವಾಗುತ್ತಿದೆ. ಭಾರತದಲ್ಲಿ ಮೊದಲ ಬ್ಯಾಸ್ಕೆಟ್‌ಬಾಲ್ ಸ್ಕೂಲ್ ಆರಂಭವಾದದ್ದು 2017ರ ಏಪ್ರಿಲ್ ತಿಂಗಳಲ್ಲಿ. ಮುಂಬೈನಲ್ಲಿರುವ ಈ ಸ್ಕೂಲ್‌ನ ಉಸ್ತುವಾರಿ ದೇಶದ ಪ್ರಮುಖ ಕ್ರೀಡಾ ವ್ಯವಸ್ಥಾಪನಾ ಕಂಪೆನಿಯಾದ ಐಒಟಿ ನೋಡಿಕೊಳ್ಳುತ್ತಿದೆ.

ಹೊಸ ಯೋಜನೆಯ ಕುರಿತು ಮಾತನಾಡಿದ ಸ್ಪೋರ್ಟ್ಸ್ ಸ್ಕೂಲ್ ನಿರ್ದೇಶಕ ಶಂಕರ್ ಯುವಿ ‘ಐಒಟಿ ಈಗಾಗಲೇ ಎನ್‌ಬಿಎ ಸ್ಕೂಲ್ ಜೊತೆ ಸಹಯೋಗ ಹೊಂದಿದೆ. ಈ ಎರಡೂ ಸಂಸ್ಥೆಗಳ ನೆರವಿನೊಂದಿಗೆ ಇಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗುವುದು. ಇದು ಯುವ ಕ್ರೀಡಾಪಟುಗಳಿಗೆ ವೈಯಕ್ತಿಕವಾಗಿಯೂ ಬೆಳೆಯಲು ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಇಲ್ಲಿನ ಕ್ರೀಡಾಪಟುಗಳಿಗೆ ಎನ್‌ಬಿಎಯಲ್ಲಿರುವ ಉತ್ತಮ ಕೋಚ್‌ಗಳಿಂದ ತರಬೇತಿ ಪಡೆಯಲು ಅವಕಾಶ ಸಿಗಲಿದೆ. ಈ ವರ್ಷದಿಂದಲೇ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.