ಚಿಬಾ (ಜಪಾನ್): ಟೋಕಿಯೊ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಭಾರತದ ಅನ್ಶು ಮಲಿಕ್, ಪ್ರೀ-ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನ ಆಘಾತ ಎದುರಿಸಿದ್ದಾರೆ.

ಮಹಿಳೆಯರ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಅನ್ಶು, ಯುರೋಪಿನ ಚಾಂಪಿಯನ್ ಬೆಲರೂಸ್‌ನ ಐರಿನಾ ಕುರಾಚಿಕಿನಾ ವಿರುದ್ಧ 2-8ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ:Tokyo Olympics ಕುಸ್ತಿ: ದೀಪಕ್ ಪುನಿಯಾ, ರವಿ ದಹಿಯಾ ಸೆಮಿಫೈನಲ್ಗೆ ಲಗ್ಗೆ

19 ವರ್ಷದ ಏಷ್ಯನ್ ಚಾಂಪಿಯನ್ ಅನ್ಶು, 0-4ರಲ್ಲಿ ಹಿನ್ನಡೆ ಅನುಭವಿಸಿದರೂ ದಿಟ್ಟ ಹೋರಾಟ ಪ್ರದರ್ಶಿಸಿದರು. ಆದರೆ ಅನುಭವಿ ಕುಸ್ತಿ ಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಹಾಗೊಂದು ವೇಳೆ ಬೆಲರೂಸ್‌ನ ಕುಸ್ತಿಪಟು ಫೈನಲ್‌ಗೆ ಪ್ರವೇಶಿಸಿದರೆ ಅನ್ಶುಗೆ ಮಗದೊಂದು ಅವಕಾಶ ತೆರೆದುಕೊಳ್ಳಲಿದೆ. ಅಲ್ಲದೆ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.