ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ರೋಯಿಂಗ್‌ನಲ್ಲಿ ಛಾಪು ಮೂಡಿಸಿದ ಭಾರತಕ್ಕೆ 11ನೇ ಸ್ಥಾನ

ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ರೋಯಿಂಗ್ ಫೈನಲ್ ರೇಸ್‌ನಿಂದ ಆಗಲೇ ಹೊರಬಿದ್ದಿರುವ ಭಾರತದ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್ ಸಿಂಗ್ ಜೋಡಿಯು, 11ನೇ ಸ್ಥಾನ ಪಡೆಯಿತು.

ಹಾಗಿದ್ದರೂ ಒಲಿಂಪಿಕ್ಸ್ ರೋಯಿಂಗ್ ಇತಿಹಾಸದಲ್ಲಿ ಭಾರತದಿಂದ ದಾಖಲಾದ ಅತ್ಯುತ್ತಮ ಸಾಧನೆ ಇದಾಗಿದೆ. ಈ ಮೂಲಕ ಭಾರತದ ಸ್ಪರ್ಧಿಗಳು ಛಾಪು ಮೂಡಿಸಿದ್ದಾರೆ.

ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ವಿಭಾಗದಲ್ಲಿ ಸ್ಪರ್ಧಿಸಿದ ಭಾರತ ಜೋಡಿಯು 6 ನಿಮಿಷ 29.66 ಸೆಕೆಂಡುಗಳಲ್ಲಿ ಗುರಿ ತಲುಪಿತು. ಅಲ್ಲದೆ ದೇಶದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಸೀ ಫಾರೆಸ್ಟ್ ವಾಟರ್‌ವೇನಲ್ಲಿ ನಡೆದ ಸ್ಪರ್ಧೆಯಲ್ಲಿ ಐರ್ಲೆಂಡ್, ಜರ್ಮನಿ ಹಾಗೂ ಇಟಲಿಯ ಸ್ಪರ್ಧಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT