ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ–2021: ಪ್ಯಾರಾಲಿಂಪಿಕ್ಸ್‌ನಲ್ಲಿ ‘ಸುಹಾಸ’

Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಈ ವರ್ಷ ಭಾರತದ ಕ್ರೀಡಾಕ್ಷೇತ್ರಕ್ಕೆ ಪ್ಯಾರಾಲಿಂಪಿಯನ್ನರೂ ಕಳೆ ತುಂಬಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಸಂಖ್ಯೆಯ 19 ಪದಕಗಳು ಭಾರತಕ್ಕೆ ಬಂದವು. ಈ ಸಾಧನೆಗಳೊಂದಿಗೆ ಕನ್ನಡಿಗರ ಸಂಭ್ರಮ ಹೆಚ್ಚಿಸಿದವರುಬ್ಯಾಡ್ಮಿಂಟನ್‌ನ ಎಸ್‍ಎಲ್-4 ವಿಭಾಗದಲ್ಲಿ ಬೆಳ್ಳಿ ಗೆದ್ದ ಸುಹಾಸ್ ಯತಿರಾಜ್.

ಐದು ಚಿನ್ನದೊಂದಿಗೆ 19 ಪದಕ ಗಳಿಸಿದ ಭಾರತ ಒಟ್ಟಾರೆ 24ನೇ ಸ್ಥಾನದಲ್ಲಿ ಮಿಂಚಿತು. ಈ ಹಿಂದೆ, 2016ರಲ್ಲಿ ಎರಡು ಚಿನ್ನ ಗೆದ್ದಿರುವುದು ಭಾರತದ ಗರಿಷ್ಠ ಸಾಧನೆಯಾಗಿತ್ತು. ಆ ವರ್ಷ ಒಟ್ಟು ನಾಲ್ಕು ಪದಕಗಳು ಭಾರತದ ಪಾಲಾಗಿದ್ದವು. 1984ರಲ್ಲೂ ನಾಲ್ಕು ಪದಕ (ತಲಾ ಎರಡು ಬೆಳ್ಳಿ, ಎರಡು ಕಂಚು) ಗಳಿಸಿ ‘ಶ್ರೇಷ್ಠ’ ಸಾಧನೆ ಮಾಡಿತ್ತು. ಈ ಬಾರಿ ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕಗಳೂ ಭಾರತದ ಕ್ರೀಡಾಪಟುಗಳ ಕೊರಳನ್ನು ಅಲಂಕರಿಸಿದ್ದವು.

ಜೀವನ ‘ಕುಸ್ತಿ’ಯಲ್ಲಿ ಖಳ ಸುಶೀಲ್
ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಕುಸ್ತಿ ಕಣದ ನಾಯಕ ನಿಜಜೀವನದಲ್ಲಿ ‘ಖಳ’ನಾಗಿ ಭಾರತ ಕ್ರೀಡಾಕ್ಷೇತ್ರಕ್ಕೆ ಕೆಟ್ಟ ಹೆಸರು ತಂದರು. ಮಾಜಿ ಜೂನಿಯರ್ ಕುಸ್ತಿ ಚಾಂಪಿಯನ್ ಸಾಗರ್ ಅವರನ್ನು ಮೇ ತಿಂಗಳಲ್ಲಿ ಥಳಿಸಿ ಕೊಂದ ಪ್ರಕರಣದಲ್ಲಿ ಅದೇ ತಿಂಗಳಾಂತ್ಯದಲ್ಲಿ ಸುಶೀಲ್ ಬಂಧನವಾಗಿತ್ತು. ಜೂನ್ ಎರಡರಿಂದ ಸುಶೀಲ್‌ ಜೈಲಿನಲ್ಲಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್‍ನಲ್ಲಿ ‘ಡಬಲ್’ ಸಾಧನೆ
ವಿಶ್ವ ಬ್ಯಾಡ್ಮಿಂಟನ್‍ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳು ಬಂದದ್ದು ವರ್ಷದ ಕೊನೆಯಲ್ಲಿ ಖುಷಿಗೆ ಕಾರಣವಾಯಿತು. ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಕೊರೊನಾದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಇದು ಬೆಳಕಿಂಡಿಯಾಗಿ ಮೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT