ನವದೆಹಲಿ: ಭಾರತದ ಪ್ರಮುಖ ಕುಸ್ತಿಪಟುಗಳು ಮಹತ್ವದ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದಾರೆ. ವಿನೇಶಾ ಪೋಗಟ್ ಹಾಗೂ ಬಜರಂಗ್ ಪೂನಿಯಾ ಸೇರಿದಂತೆ ಪ್ರಮುಖರು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ಇದೇ 23ರಿಂದ ನಡೆಯಲಿರುವ ಇಬ್ರಾಹಿಂ ಮುಸ್ತಫಾ ರ‍್ಯಾಂಕಿಂಗ್ ಸಿರೀಸ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ವಿನೇಶಾ, ಬಜರಂಗ್, ರವಿ ದಹಿಯಾ, ದೀಪಕ್ ಪೂನಿಯಾ, ಅನ್ಶು ಮಲಿಕ್, ಸಂಗೀತಾ ಪೋಗಟ್ ಈ ತಿಂಗಳಲ್ಲಿ 2ನೇ ಬಾರಿ ಪ್ರಮುಖ ಟೂರ್ನಿ ಯಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ತಾವು ಸಂಪೂರ್ಣ ಸಿದ್ಧರಾಗಿಲ್ಲವೆಂದು ಜಾಗ್ರೆಬ್ ಓಪನ್‌ನಲ್ಲಿ ಕಣಕ್ಕಿಳಿದಿರಲಿಲ್ಲ.

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಬಾಕ್ಸರ್ ಮೇರಿ ಕೋಮ್ ನೇತೃತ್ವದ ಮೇಲುಸ್ತುವಾರಿ ಸಮಿತಿಯು ಈಜಿಪ್ಟ್ ಟೂರ್ನಿಗೆ 27 ಕುಸ್ತಿಪಟುಗಳ ತಂಡವನ್ನು ಪ್ರಕಟಿಸಿದೆ.

ಏಷ್ಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್‌ಗೆ ರ‍್ಯಾಂಕಿಂಗ್ ಪಾಯಿಂಟ್ಸ್ ಗಳಿ ಸಲು ಈಜಿಪ್ಟ್ ಟೂರ್ನಿ ನಿರ್ಣಾಯಕವಾಗಿದೆ.

ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್‌ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪ್ರಮುಖ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಫೆಡರೇಷನ್‌ಅನ್ನು ವಿಸರ್ಜಿಸುವವರೆಗೆ ಮತ್ತು ಅಧ್ಯಕ್ಷರನ್ನು ವಜಾಗೊಳಿಸುವವರೆಗೆ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.