ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಮೂರನೇ ಸುತ್ತಿಗೆ ಲಕ್ಷ್ಯ ಸೇನ್, ಆಕರ್ಷಿ

Published 21 ಡಿಸೆಂಬರ್ 2023, 15:56 IST
Last Updated 21 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಗುವಾಹಟಿ: ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್‌ ಮತ್ತು ಅಗ್ರ ಶ್ರೇಯಾಂಕದ ಆಕರ್ಷಿ ಕಶ್ಯಪ್ ಇಲ್ಲಿ ನಡೆಯುತ್ತಿರುವ 85ನೇ ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.  

ಸೇನ್ 21-8, 21-5ರಲ್ಲಿ ಟಿ. ಸಿದ್ಧಾರ್ಥ್ ವಿರುದ್ಧ ಗೆದ್ದರೆ, ಆಕರ್ಷಿ 21-18, 21-11 ಅಂತರದಲ್ಲಿ 32 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.

ಸೇನ್ ಮತ್ತು ಸಿದ್ಧಾರ್ಥ್ ಮೊದಲ ಗೇಮ್‌ನಲ್ಲಿ ಪ್ರತಿ ಪಾಯಿಂಟ್‌ಗಾಗಿ ಹೋರಾಡಿದರು ಮತ್ತು ಅವರು 5-5 ರಲ್ಲಿ ಸಮಬಲ ಸಾಧಿಸಿದರು. ನಂತರ ಸೇನ್‌ ಮೊದಲ ಗೇಮ್ ಅನ್ನು 21-8 ರಲ್ಲಿ ಗೆದ್ದರು. ನಂತರ ಎರಡನೇ ಗೇಮ್‌ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ 21-5 ರಿಂದ ಗೆದ್ದರು. ಪಂದ್ಯವನ್ನು ಕೇವಲ 25 ನಿಮಿಷಗಳಲ್ಲಿ ಮುಗಿಸಿದರು.

ನಂತರ, ಬಿಡಬ್ಲ್ಯೂಎಫ್ 2023 ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಕನ್ನಡಿಗ ಆಯುಷ್ ಶೆಟ್ಟಿ ಅವರು ನೀರ್ ನೆಹ್ವಾಲ್ ಅವರಿಂದ ಕಠಿಣ ಸವಾಲು ಎದುರಿಸಿ, 23-25, 21-18, 21-12 ರಿಂದ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT