ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕವನ್ನು ನೆದರ್ಲೆಂಡ್ಸ್‌ನ ಕ್ಯಾರೊಲಿನ್ ಗ್ರೂಟ್ ಗೆದ್ದಿದ್ದಾರೆ.
ಮಹಿಳೆಯರ ಟ್ರ್ಯಾಕ್ ಸೈಕ್ಲಿಂಗ್‌ನ 500 ಮೀ. ಟೈಮ್ ಟ್ರಯಲ್ ಸಿ4-5 ವಿಭಾಗದಲ್ಲಿ 35.390 ಸೆಕೆಂಡುಗಳಲ್ಲಿ ಗುರಿ ತಲುಪಿದ ಗ್ರೂಟ್, ಚಿನ್ನದ ಪದಕ ಜಯಿಸಿದ್ದಾರೆ.
ಫ್ರಾನ್ಸ್‌ನ ಮೇರಿ ಪಟೌಲೆಟ್ ಬೆಳ್ಳಿ ಸಾಧನೆಯ ಮೂಲಕ ಆತಿಥೇಯ ರಾಷ್ಟ್ರದ ಮೊದಲ ಪದಕ ಗೆದ್ದರು. ಕೆನೆಡಾದ ಕೇಟ್ ಒಬ್ರಿಯಾನ್ ಕಂಚಿನ ಪದಕ ಗೆದ್ದರು.
ಮೊದಲ ದಿನವೇ ಚೀನಾದ ಸ್ಪರ್ಧಿಗಳಿಗೆ ನಾಲ್ಕು ಪದಕ...
ಮತ್ತೊಂದೆಡೆ ಮೊದಲ ದಿನವೇ ಚೀನಾದ ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳು ನಾಲ್ಕು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.