ಕೊಕ್ಕೊ ವಿಶ್ವಕಪ್‌ನಲ್ಲಿ ಚೈತ್ರಾ ಮಿಂಚುವಾಗ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಅಭಿನಂದನೆ ಮತ್ತು ಮೆಚ್ಚುಗೆಯ ಮಹಾಪೂರವನ್ನೇ ಸಚಿವರು, ಶಾಸಕರು, ಸಂಘ–ಸಂಸ್ಥೆಯವರು ಹರಿಸಿದರು. ಆದರೆ ಇಷ್ಟರಿಂದಲೇ ಕುರುಬೂರು ಹೆಣ್ಣುಮಕ್ಕಳು ಕೊಕ್ಕೊ ಆಟದಲ್ಲಿ ಉನ್ನತಿಗೇರಲು ಸಾಧ್ಯವಿಲ್ಲ. ಇಲ್ಲೊಂದು ಕೊಕ್ಕೊ ಅಕಾಡೆಮಿ ಆಗಬೇಕು. ಆಗ ಮಾತ್ರ ಅಭಿನಂದನೆಗೆ ಬೆಲೆ ಬರುತ್ತದೆ.
ನಮ್ಮ ಸಾಧನೆಗೆ ಇವೇ ಸಾಕ್ಷಿ
ಕೊಕ್ಕೊ ಅಭ್ಯಾಸ ನಿರತ ಆಟಗಾರ್ತಿಯರು
ಪೋಷಕರ ಪ್ರೀತಿ–ಪ್ರೋತ್ಸಾಹ
ಟಿ. ನರಸೀಪುರ ತಾಲ್ಲೂಕಿನ ರಂಗಸಮುದ್ರ, ಸೋಸಲೆ ಸೇರಿದಂತೆ ಅನೇಕ ಊರುಗಳಲ್ಲಿ ಬಲಿಷ್ಠ ಕೊಕ್ಕೊ ತಂಡ ಇತ್ತು ಎಂದು ಮಂಜುನಾಥ್ ನೆನಪಿಸಿಕೊಳ್ಳುತ್ತಾರೆ. ಹಾಗಾದರೆ ಟಿ. ನರಸೀಪುರ ಕೊಕ್ಕೊ ನೆಲವೇ? ಅಂದು ಆಡಲು ಮನಸು ಮಾಡಿದ ಹಳ್ಳಿಯ ಹೆಣ್ಣುಮಕ್ಕಳು ಯಾವ್ಯಾವುದೋ ಕಾರಣಕ್ಕೆ ಬಿಟ್ಟುಹೋಗಿರಬಹುದು. ಆದರೆ ಇಂದಿನ ದೊಡ್ಡ ಯಶಸ್ಸಿನ ಹಿಂದೆ ಅವರ ಕೊಡುಗೆಯನ್ನು ಮರೆಯಬಾರದು. ಇಷ್ಟೇ ಅಲ್ಲ, ತುಂಡು ಬಟ್ಟೆ ಹಾಕಿ, ಕುಕ್ಕರಗಾಲಲ್ಲಿ ಕೂತು ಆಡುವಂಥ ಆಟಕ್ಕೆ ಪೋಷಕರು ನಿಂದನೆಯ ಮಾತುಗಳನ್ನು ಕೇಳಬೇಕಾಯಿತು. ಆದರೂ ಅವುಗಳನ್ನು ನಿರ್ಲಕ್ಷಿಸಿ ತಮ್ಮ ಹೆಣ್ಣುಮಕ್ಕಳನ್ನು ಅಭ್ಯಾಸಕ್ಕೆ ಕಳುಹಿಸಿದ್ದು ಅವರ ಪ್ರಬುದ್ಧ ನಡೆ. ಒಂದು ಗೆಲುವಿನ ಹಿಂದೆ ಇಂತಹ ಅದೆಷ್ಟೋ ಕಾಣದ ಮುಖಗಳಿರುತ್ತವೆ.