ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌:ಯುನೀಕ್ ಮಾಸ್ಟರ್ಸ್‌ಗೆ ‘ಸಿಲ್ವರ್‌’ಪ್ರಶಸ್ತಿ

ಜೂತಿಕಾ ತಂಡ ರನ್ನರ್ ಅಪ್‌
Published 12 ಜೂನ್ 2024, 15:28 IST
Last Updated 12 ಜೂನ್ 2024, 15:28 IST
ಅಕ್ಷರ ಗಾತ್ರ

ಮಂಗಳೂರು: ಯುನೀಕ್ ಮಾಸ್ಟರ್ಸ್‌ ತಂಡ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ‘ಸಿಲ್ವರ್’ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು.

ಕರಾವಳಿ ಬ್ರಿಜ್ ಸಂಸ್ಥೆಯ ಸಹಯೋಗದಲ್ಲಿ ಭಾರತ ಬ್ರಿಜ್ ಫೆಡರೇಷನ್‌ ಮತ್ತು ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆಗಳು ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಜೂತಿಕಾ ತಂಡವನ್ನು ಯುನೀಕ್ ಮಣಿಸಿತು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಏಸ್ ಕಾನ್ಕರರ್ಸ್ ವಿರುದ್ಧ ಹೆಕ್ಸಗನ್ ಜಯ ಸಾಧಿಸಿತು.

ಸ್ವಿಸ್ ಲೀಗ್ ಮಾದರಿಯ ಕ್ವಾಲಿಫೈಯರ್ ಹಂತದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ಯುನೀಕ್ ಮಾಸ್ಟರ್ಸ್‌  ನಂತರದ ಹಂತಗಳಲ್ಲಿ ಅಮೋಘ ಪ್ರದರ್ಶನ ತೋರಿತ್ತು. ರಾಜೇಂದ್ರ ರೇ, ತಪಸ್ ದಾಸ್ ಗುಪ್ತಾ, ಸೌರವ್ ಸಿಲ್‌, ಅರ್ಣವ್ ಘೋಷ್‌, ಬೋಲಾನಾಥ್ ಘೋಷ್ ಮತ್ತು ಸಲಿಲ್ ಕುಮಾರ್ ಮಂಡಲ್ ಅವರನ್ನು ಒಳಗೊಂಡ ತಂಡ ಫೈನಲ್‌ನಲ್ಲಿ ಸುಲಭ ಜಯ ಸಾಧಿಸಿತು.

‘ಗೋಲ್ಡ್’ ವಿಭಾಗದಲ್ಲಿ ಮೇವರಿಕ್ಸ್, ಮೋನಿಕಾ ಜಾಜು, ಫೋರ್ಮಿಡೇಬಲ್ಸ್ ಮತ್ತು ಹೆಕ್ಸಗನ್‌ ತಂಡಗಳು ಫೈನಲ್ ಮತ್ತು ಪ್ಲೇ ಆಫ್ ಹಂತ ಪ್ರವೇಶಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT