ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಸ್ತಿ: ವಿನೇಶಾ ಫೋಗಾಟ್‌ಗೆ ಚಿನ್ನ

Published 4 ಫೆಬ್ರುವರಿ 2024, 16:20 IST
Last Updated 4 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ಜೈಪುರ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶಾ ಫೋಗಾಟ್‌ ಅವರು ಭಾನುವಾರ ನಡೆದ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಆಡಳಿತ ನೋಡಿಕೊಳ್ಳಲು ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ರಚಿಸಿರುವ ತಾತ್ಕಾಲಿಕ ಸಮಿತಿಯು ಈ ಚಾಂಪಿಯನ್‌ಷಿಪ್ ಆಯೋಜಿಸಿದೆ.

ವಿನೇಶಾ ಅವರು  ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಿಂದ ಸೋಲಿಸಿದರು.  ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ಪ್ರತಿನಿಧಿಸುವ 29 ವರ್ಷದ ವಿನೇಶಾ 2018ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಮತ್ತೊಂದು  ಹಣಾಹಣಿಯಲ್ಲಿ, 2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತರಾದ ಹರಿಯಾಣದ ಅಂಶು ಮಲಿಕ್ 59 ಕೆಜಿ ವಿಭಾಗದಲ್ಲಿ 2020ರ ಏಷ್ಯನ್ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತೆ ಸರಿತಾ ಮೋರ್ (ರೈಲ್ವೆ) ಅವರನ್ನು 8-3 ಅಂತರದಿಂದ ಸೋಲಿಸಿದರು.

ಹರಿಯಾಣದ ವನಿತೆಯರು 189 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಆರ್‌ಎಸ್‌ಪಿಬಿ 187 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಪುದುಚೇರಿ 81 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪುರುಷರ ಗ್ರೀಕೊ-ರೋಮನ್ ವಿಭಾಗದಲ್ಲಿ ಆರ್‌ಎಸ್‌ಪಿಬಿ 208 ಅಂಕಗಳೊಂದಿಗೆ  ವಿಜೇತರಾಗಿ ಹೊರಹೊಮ್ಮಿದರೆ, ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (127 ಪಾಯಿಂಟ್ಸ್) ಮತ್ತು ಮಹಾರಾಷ್ಟ್ರ (113 ಪಾಯಿಂಟ್ಸ್) ನಂತರದ ಸ್ಥಾನಗಳಲ್ಲಿವೆ.

ಕೊನೆ ದಿನವಾದ ಸೋಮವಾರ ಪುರುಷರ ಫ್ರಿ ಸ್ಟೈಲ್ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT