ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ: ವಿನೇಶಾ ಫೋಗಾಟ್‌ಗೆ ಕಂಚು

Last Updated 15 ಸೆಪ್ಟೆಂಬರ್ 2022, 4:20 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್‌: ಭಾರತದ ವಿನೇಶಾ ಫೋಗಾಟ್‌ ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಅವರು ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪದಕ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಶ್ರೇಯ ಸಂಪಾದಿಸಿದರು.

53 ಕೆಜಿ ವಿಭಾಗದಲ್ಲಿ ಅಂಗಣಕ್ಕಿಳಿದಿದ್ದ ವಿನೇಶಾ ಕಂಚಿನ ಪದಕದ ಬೌಟ್‌ನಲ್ಲಿ 8–0ಯಿಂದ ಸ್ವೀಡನ್‌ನ ಜೊನ್ನಾ ಮಾಲ್‌ಮರ್ಗನ್ ಅವರನ್ನು ಪರಾಭವಗೊಳಿಸಿದರು.

28 ವರ್ಷದ ವಿನೇಶಾ ಅವರಿಗೆ ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚು ಒಲಿದಿತ್ತು.

ಈ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ವಿನೇಶಾ ಮಂಗೋಲಿಯಾದ ಭಟ್ಕುಯಗ್‌ ಖುಲಾನ್ ಎದುರು ಸೋತಿದ್ದರು. ಆದರೆ ಖುಲಾನ್ ಫೈನಲ್ ತಲುಪಿದ್ದರಿಂದ ವಿನೇಶಾ ಅವರಿಗೆ ರಿಪೇಚ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು.

ರಿಪೇಚ್ನ ಮೊದಲ ಸುತ್ತಿನಲ್ಲಿ ಕಜಕಸ್ತಾನದ ಜುಲ್‌ದಿಜ್ ಎಶಿಮೊವಾ ಅವರನ್ನು ಸೋಲಿಸಿದ ವಿನೇಶಾ, ಬಳಿಕ ಅಜರ್‌ಬೈಜಾನ್‌ನ ಲೇಲಾ ಗುರ್ಬನೊವಾ (ಗಾಯಗೊಂಡು ನಿವೃತ್ತಿ) ಎದುರು ಗೆದ್ದು ಕಂಚಿನ ಪದಕದ ಸುತ್ತು ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT