ಬಟುಮಿ, ಜಾರ್ಜಿಯಾ: ಭಾರತದ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರು ಫಿಡೆ ಮಹಿಳೆಯರ ಚೆಸ್ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದರು.

ಭಾನುವಾರ ನಡೆದ ಕ್ವಾರ್ಟರ್ಫೈನಲ್ ಎರಡನೇ ಸುತ್ತಿನಲ್ಲಿ ಅವರು ಚೀನಾದ ಯುಕ್ಸಿನ್ ಸಾಂಗ್ ವಿರುದ್ಧ ಡ್ರಾ ಮಾಡಿಕೊಂಡರು.

ಶನಿವಾರ ನಡೆದಿದ್ದ ಮೊದಲ ಸುತ್ತಿನಲ್ಲಿ ಹಂಪಿ ಜಯಿಸಿದ್ದರು. ಅದರಿಂದಾಗಿ ಸೆಮಿಫೈನಲ್ ಹಾದಿ ಸುಗಮವಾಯಿತು. ಇದರೊಂದಿಗೆ ಅವರು ನಾಲ್ಕನೇ ಸ್ಥಾನ ಪಡೆಯುವುದು ಖಚಿತವಾಗಿದೆ.

ಒಂದೊಮ್ಮೆ ಅವರು ಅಗ್ರ ಮೂರರಲ್ಲಿ ಸ್ಥಾನ ಗಳಿಸಿದರೆ ಮುಂಬರುವ ಮಹಿಳೆಯರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ.

ಭಾರತದ ಗ್ರ್ಯಾಂಡ್ಮಾಸ್ಟರ್ ಡಿ. ಹಾರಿಕಾ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ ದಿವ್ಯಾ ದೇಶಮುಖ ಅವರು ಮುಖಾಮುಖಿಯಾಗಿದ್ದ ಇನ್ನೊಂದು ಹಣಾಹಣಿಯು ಡ್ರಾ ಆಯಿತು. ಸೋಮವಾರ ನಡೆಯಲಿರುವ ಟೈಬ್ರೇಕರ್ನಲ್ಲಿ ಅವರಿಬ್ಬರೂ ಪೈಪೋಟಿ ನಡೆಸುವರು.

ಗ್ರ್ಯಾಂಡ್ಮಾಸ್ಟರ್ ಆರ್. ವೈಶಾಲಿ ಅವರಿಗೆ ಅದೃಷ್ಟ ಜೊತೆ ನೀಡಲಿಲ್ಲ. ಅಲ್ಪ ಅಂತರದಲ್ಲಿ ಅವರು ಮಾಜಿ ವಿಶ್ವ ಚಾಂಪಿಯನ್ ಝಾಂಗೈ ಟ್ಯಾನ್ ವಿರುದ್ಧ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.