ಪರ್ತ್: ಕಠಿಣ ಹೋರಾಟ ನೀಡಿದ ಹೊರತಾಗಿಯೂ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸದ ಮೊದಲ ಹಾಕಿ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ಎ ತಂಡದ ಎದುರು 3–5 ಗೋಲುಗಳಿಂದ ಸೋಲನುವಭವಿಸಿತು.

ಭಾರತ ತಂಡ ಈ ಪ್ರವಾಸದಲ್ಲಿ ಐದು ಪಂದ್ಯಗಳನ್ನು ಆಡುತ್ತಿದೆ. ಭಾನುವಾರ ಎರಡನೇ ಪಂದ್ಯ ನಡೆಯಲಿದೆ.

ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಮಹಿಮಾ ಟೆಟೆ (27ನೇ ನಿಮಿಷ), ನವನೀತ್ ಕೌರ್ (45ನೇ ನಿ.), ಲಾಲ್ರೆಮ್ಸಿಯಾಮಿ (50ನೇ ನಿ.) ಗೋಲು ಹೊಡೆದರು. ಆಸ್ಟ್ರೇಲಿಯಾ ಎ ತಂಡದ ಪರ ನಿಯಾಸಾ ಫ್ಲಿನ್ (3ನೇ ನಿ.), ಒಲಿಲಿವಿಯಾ ಡೌನ್ಸ್ (9ನೇ ನಿ.), ರುಬಿ ಹ್ಯಾರಿಸ್ (11ನೇ ನಿ.), ಟಾಟಮ್ ಸ್ಟೀವರ್ಟ್ (21ನೇ ನಿ.) ಮತ್ತು ಕೆಂಡ್ರಾ ಫಿಟ್ಜ್ಪ್ಯಾಟ್ರಿಕ್ (44ನೇ ನಿ.) ಗೋಲು ಗಳಿಸಿದರು.

ಫ್ಲಿನ್ ಅವರು ಫೀಲ್ಡ್ ಗೋಲು ಹೊಡೆದಿದ್ದರಿಂದ ಆಸ್ಟ್ರೇಲಿಯಾ ಎ ತಂಡ ಪಂದ್ಯದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಡೌನ್ಸ್ ಮತ್ತು ಹ್ಯಾರಿಸ್ ಭಾರತದ ರಕ್ಷಣಾಕೋಟೆ ಯನ್ನು ಭೇದಿಸುವಲ್ಲಿ ಯಶಸ್ವಿಯಾಗಿ ಮತ್ತೆ ಎರಡು ಫೀಲ್ಡ್ ಗೋಲುಗಳನ್ನು ಬಾರಿಸಿದರು. ಇದರಿಂದ ಮೊದಲ ಕ್ವಾರ್ಟರ್ನಲ್ಲಿ ಆತಿಥೇಯ ತಂಡ 3–0 ಗೋಲಿನಿಂದ ಮುನ್ನಡೆ ಪಡೆಯಿತು.

ಆಸ್ಟ್ರೇಲಿಯಾ ತಂಡ ಎರಡನೇ ಕ್ವಾರ್ಟರ್ನಲ್ಲೂ ಭಾರತ ತಂಡದ ಮೇಲೆ ಒತ್ತಡ ಹೇರಿತು.

ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿ ಭಾರತದ ಆಟಗಾರ್ತಿಯರು ತೋಳಿಗೆ ಕಪ್ಪುಪಟ್ಟಿ ಕಟ್ಟಿ ಆಟವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.