ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಟಿ.ಟಿ. ಟೀಮ್ ಚಾಂಪಿಯನ್‌ಷಿಪ್: ಭಾರತ ಮಹಿಳಾ ತಂಡಕ್ಕೆ ಜಯ, ಪುರುಷರಿಗೆ ಸೋಲು

Published 19 ಫೆಬ್ರುವರಿ 2024, 12:39 IST
Last Updated 19 ಫೆಬ್ರುವರಿ 2024, 12:39 IST
ಅಕ್ಷರ ಗಾತ್ರ

ಬೂಸಾನ್‌: ಭಾರತ ಮಹಿಳಾ ತಂಡ, ವಿಶ್ವ ಟೇಬಲ್ ಟೆನಿಸ್‌ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಉಜ್ಬೇಕಿಸ್ತಾನ ತಂಡವನ್ನು 3–0 ಯಿಂದ ಸೋಲಿಸಿದರೆ, ಪುರುಷರ ತಂಡವು ದಕ್ಷಿಣ ಕೊರಿಯಾ ತಂಡಕ್ಕೆ 0–3 ರಿಂದ ಮಣಿಯಿತು.

ಐಹಿಕಾ ಮುಖರ್ಜಿ ಮತ್ತು ಶ್ರೀಜಾ ಅಕುಲ ಅವರಿಗೆ ವಿಶ್ರಾಂತಿ ನೀಡಿ, ಅರ್ಚನಾ ಕಾಮತ್ ಮತ್ತು ದಿಯಾ ಚಿತಾಳೆ ಅವರನ್ನು ಕಣಕ್ಕಿಳಿಸಲಾಯಿತು. ಅನುಭವಿ ಮಣಿಕಾ ಬಾತ್ರಾ ಅವರೂ ತಂಡದಲ್ಲಿದ್ದರು. ಅರ್ಚನಾ 11–7, 11–3, 11–6 ರಿಂದ ರಿಮ್ಮಾ ಗುಫ್ರಾನೊವ್ ಅವರನ್ನು ಮಣಿಸಿದರೆ, ಮಣಿಕಾ 11–7, 11–4, 11–1 ರಿಂದ ಮಾರ್ಕಬೊ ಮಗ್ದೀವಾ ಅವರನ್ನು ಸೋಲಿಸಿದರು. ದಿಯಾ ಮಾತ್ರ ಸ್ವಲ್ಪ ಪ್ರತಿರೋಧ ಎದುರಿಸಿದರೂ ಅಂತಿಮವಾಗಿ 11–6, 10–12, 11–4, 11–6 ರಿಂದ ರೊಝಲಿನಾ ಖಡ್ಜೀವಾ ಅವರನ್ನು ಹಿಮ್ಮೆಟ್ಟಿಸಿದರು.‌

ಮೊದಲ ಪಂದ್ಯದಲ್ಲಿ ಚೀನಾ ಎದುರು 3–2 ರಿಂದ ಸೋತಿದ್ದ ಭಾರತಕ್ಕೆ ಇದು ಸತತ ಎರಡನೇ ಗೆಲುವು. ಒಂದನೇ ಗುಂಪಿನಲ್ಲಿ ಈಗ ಎರಡನೇ ಸ್ಥಾನದಲ್ಲಿದೆ. ಭಾರತ ತಂಡವು ಗುಂಪಿನಲ್ಲಿ ಕೊನೆಯ ಪಂದ್ಯವನ್ನು ಮಂಗಳವಾರ ಸ್ಪೇನ್ ವಿರುದ್ಧ ಆಡಲಿದೆ. ಭಾರತ ಈ ಮೊದಲ ಹಂಗೆರಿ ಮೇಲೆ 3–2 ರಲ್ಲಿ ಜಯಗಳಿಸಿತ್ತು.

ಪುರುಷರ ವಿಭಾಗದಲ್ಲಿ ಭಾರತ ಹೆಚ್ಚು ಹೋರಾಟ ತೋರದೇ ಮೂರನೇ ಶ್ರೇಯಾಂಕದ ದಕ್ಷಿಣ ಕೊರಿಯಾಕ್ಕೆ ಸೋತಿತು. ವಿಶ್ವ ಕ್ರಮಾಂಕದಲ್ಲಿ 67ನೇ ಸ್ಥಾನ ಪಡೆದಿರುವ ಹರ್ಮೀತ್ ದೇಸಾಯಿ 4–11, 10–12, 8–11 ರಿಂದ ವಿಶ್ವದ 14ನೇ ಕ್ರಮಾಂಕದ ಆಟಗಾರ ಜಾಂಗ್ ವೂಜಿನ್ ಅವರಿಗೆ ಶರಣಾದರು. ಸತ್ಯನ್ 5–11, 7–11, 7–11 ರಿಂದ ವಿಶ್ವದ 16ನೇ ಕ್ರಮಾಂಕದ ಆಟಗಾರ ಲಿಮ್‌ ಜೊಂಗ್‌ಹೂನ್ ಅವರಿಗೆ ಮಣಿದರು. ಶರತ್‌ ಒಂದಿಷ್ಟು ಹೋರಾಟ ತೋರಿದರೂ 9–11, 11–8, 6–11, 5–11 ರಿಂದ ಲೀ ಸನ್ ಸು ಅವರಿಗೆ ಸೋತರು.

ಭಾರತ ಮೊದಲ ಪಂದ್ಯದಲ್ಲಿ ಚಿಲಿ ಎದುರು ಗೆದ್ದು ಶುಭಾರಂಭ ಮಾಡಿದರೂ, ಭಾನುವಾರ ಎರಡನೇ ಪಂದ್ಯದಲ್ಲಿ 1–3 ರಿಂದ ಪೋಲಂಡ್ ಎದುರು ಸೋಲನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT