ಮುಂಬೈ: ಭಾರತದ ಆರ್.ಪ್ರಗ್ನಾನಂದ, ವಿಶ್ವ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕ ಗೆದ್ದರು. 18 ವರ್ಷದೊಳಗಿನವರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಒಟ್ಟು ಏಳು ಪದಕಗಳು (ಒಂದು ಚಿನ್ನ, ಮೂರು ಬೆಳ್ಳಿ, ಮೂರು ಕಂಚು) ಒಲಿದವು.

14 ವರ್ಷದ ಚೆನ್ನೈನ ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ, 11ನೇ ಹಾಗೂ ಕೊನೆಯ ಸುತ್ತಿನಲ್ಲಿ ಜರ್ಮನಿಯ ವ್ಯಾಲೆಂಟಿನ್ ಬಕಲ್ಸ್ ಎದುರು ಡ್ರಾ ಸಾಧಿಸಿದರು. ಒಟ್ಟು 9 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಡಬ್ಲ್ಯೂಐಎಂ ದಿವ್ಯಾ ದೇಶಮುಖ್ ಬೆಳ್ಳಿ ಹಾಗೂ ರಕ್ಷಿತಾ ರವಿ ಕಂಚಿನ ಪದಕ ಗೆದ್ದರು.

14 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಎಫ್‌ಎಂ ಎಲ್. ಆರ್. ಶ್ರೀಹರಿ ಬೆಳ್ಳಿ ಹಾಗೂ ಶ್ರೀಶವಾನ್ ಮರಲಕ್ಷಿಕಾರಿ ಕಂಚು ತಮ್ಮದಾಗಿಸಿಕೊಂಡರು. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಂತಿಕಾ ಅಗರವಾಲ್ ಬೆಳ್ಳಿ ಪದಕ ಜಯಿಸಿದರು.

ಭಾರತದ ಪರ ಮತ್ತೊಂದು ಕಂಚಿನ ಪದಕವನ್ನು 16 ವರ್ಷದೊಳಗಿನವರ ಮುಕ್ತ ವಿಭಾಗದಲ್ಲಿ ಸಿಎಮ್ ಅರಣ್ಯಕ ಘೋಷ್ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.