ಭಾರತಕ್ಕೆ ಕ್ರೀಡೆಗಳ 13ನೇ ದಿನ (ಬುಧವಾರ) ಸುದಿನವಾಗಲಿಲ್ಲ. ಫೈನಲ್ ಆಡಬೇಕಾದ ವಿನೇಶ್ ಫೋಗಟ್ ಬೆಳಿಗ್ಗೆ 100 ಗ್ರಾಂ ಹೆಚ್ಚು ತೂಕ ತೂಗಿದ ಕಾರಣ ಅರ್ನಹರಾಗಿದ್ದು ಆಘಾತಕ್ಕೆ ಕಾರಣವಾಯಿತು. ಅಂತಿಮ್ ಪಂಘಲ್ ಅವರು ಶಿಸ್ತುಕ್ರಮ ಉಲ್ಲಂಘಿಸಿ ಭಾರತದ ಪಾಳಯ ಮುಜುಗರ ಎದುರಿಸಬೇಕಾಯಿತು. ಸಂಜೆ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬಹುತೇಕ ಹೊತ್ತು ಮೂರನೇ ಸ್ಥಾನದಲ್ಲಿದ್ದರು, ಅಂತಿಮವಾಗಿ ನಾಲ್ಕನೇ ಸ್ಥಾನಕ್ಕೆ ಸರಿಯಬೇಕಾಯಿತು. ಮೂರು ವರ್ಷ ಹಿಂದೆ ಚಾನು ಅವರು ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದರು. ಅಥ್ಲೀಟುಗಳ ನಿರಾಶಾದಾಯಕ ಪ್ರದರ್ಶನ ಮುಂದುವರಿದಿತ್ತು.