ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಟಿಎಫ್‌ ಮಹಿಳಾ ವಿಶ್ವ ಟೂರ್‌ ಅರ್ಹತಾ ಸುತ್ತು: ಯಶಸ್ವಿನಿಗೆ ಅಚ್ಚರಿ ಗೆಲುವು

Published 19 ನವೆಂಬರ್ 2023, 14:13 IST
Last Updated 19 ನವೆಂಬರ್ 2023, 14:13 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಯಶಸ್ವಿನಿ ಪನ್ವಾರ್‌ ಅವರು ಇಲ್ಲಿ ಆರಂಭವಾದ ಐಟಿಎಫ್‌ ಮಹಿಳಾ ವಿಶ್ವ ಟೂರ್‌ ಟೆನಿಸ್‌ ಟೂರ್ನಿಯ ಅರ್ಹತಾ ಹಂತದ ಮೊದಲ ಸುತ್ತಿನಲ್ಲಿ ಅಚ್ಚರಿಯ ಜಯ ಸಾಧಿಸಿದರು.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಟೆನಿಸ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಯಶಸ್ವಿನಿ 7–5, 6–2 ರಿಂದ ನೆದರ್ಲೆಂಡ್ಸ್‌ನ ಡೆಮಿ ಟ್ರಾನ್‌ ಅವರನ್ನು ಮಣಿಸಿದರು.

ಎರಡು ಗಂಟೆಗೂ ಹೆಚ್ಚು ಅವಧಿ ನಡೆದ ಇನ್ನೊಂದು ಪಂದ್ಯದಲ್ಲಿ ವಂಶಿತಾ ಪಠಾನಿಯಾ 6–3, 4–6, 10–8 ರಿಂದ ಪ್ರಿಯಾನ್ಶಿ ಭಂಡಾರಿ ಅವರನ್ನು ಪರಾಭವಗೊಳಿಸಿದರು.

ಅರ್ಹತಾ ಸುತ್ತಿನಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಸಂದೀಪ್ತಿ ಸಿಂಗ್‌ ರಾವ್‌ 6–0, 6–1 ರಿಂದ ಸಾಯ್‌ ಜಾನ್ವಿ ವಿರುದ್ಧ ಗೆದ್ದರೆ, ಎರಡನೇ ಶ್ರೇಯಾಂಕದ ಆಟಗಾರ್ತಿ ಶ್ರಾವ್ಯ ಶಿವಾನಿ 6–1, 7–5 ರಿಂದ ಪ್ರಿಯಾಂಕಾ ರಾಡ್ರಿಕ್ಸ್‌ ಅವರನ್ನು ಮಣಿಸಿದರು.

ಇತರ ಪಂದ್ಯಗಳಲ್ಲಿ ಸೋನಲ್‌ ಪಾಟೀಲ್‌ 4–6, 6–4, 10–8 ರಿಂದ ಲಾಲಿತ್ಯ ಕಲ್ಲೂರಿ ವಿರುದ್ಧ; ಸೋಹಾ ಸಾದಿಕ್‌ 6–2, 6–3 ರಿಂದ ಶೆಫಾಲಿ ಅರೋರಾ ವಿರುದ್ಧ; ಸೆಜಲ್‌ ಗೋಪಾಲ್‌ 3–6, 6–2, 11–9 ರಿಂದ ಮಿಹಿಕಾ ಯಾದವ್‌ ವಿರುದ್ಧ; ಆರತಿ ಮುನಿಯನ್ 6–0, 6–3 ರಿಂದ ವಂಶಿಕಾ ಚೌಧರಿ ವಿರುದ್ದ; ಪೂಜಾ ಇಂಗಳೆ 6–0, 6–1 ರಿಂದ ನಿತೇಶಾ ಸೆಲ್ವರಾಜ್‌ ವಿರುದ್ಧ; ನಿಧಿತ್ರಾ ರಾಜಮೋಹನ್ 6–4, 6–2 ರಿಂದ ಸಂಜಿತಾ ರಮೇಶ್‌ ವಿರುದ್ಧ; ಎಸ್‌.ವಿದ್ಯಾಲಕ್ಷ್ಮಿ 6–0, 6–0 ರಿಂದ ಅಪೂರ್ವ ವೇಮುರಿ ವಿರುದ್ಧವೂ ಗೆಲುವು ಸಾಧಿಸಿದರು.

ಅರ್ಹತಾ ಹಂತದ ಅಂತಿಮ ಸುತ್ತಿನ ಪಂದ್ಯಗಳು ಸೋಮವಾರ ನಡೆಯಲಿದ್ದು, ಮಂಗಳವಾರದಿಂದ ಪ್ರಧಾನ ಹಂತದ ಪಂದ್ಯಗಳು ಆಯೋಜನೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT