ಮನಾಮ, ಬಹರೇನ್: ಭಾರತದ ಆರು ಬಾಕ್ಸರ್ಗಳು ಇಲ್ಲಿ ನಡೆಯುತ್ತಿರುವ ಯೂತ್ ಏಷ್ಯನ್ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಅರ್ಧ ಡಜನ್ ಪದಕಗಳನ್ನು ಖಚಿತಪಡಿಸಿದರು.

15 ವರ್ಷದ ಖುಷಿ ಚಂದ್ 5–0 ಅಂತರದಿಂದ ಮಂಗೋಲಿಯಾದ ಅಲ್ತಾಂಜುಲ್ ಅಲ್ತಂಗದಾಸ್ ಅವರನ್ನು ಮಣಿಸಿ ಬಾಲಕಿಯರ 46 ಕೆಜಿ ವಿಭಾಗ ದಲ್ಲಿ ಫೈನಲ್ ಪ್ರವೇಶಿಸಿದರು. 54 ಕೆಜಿ ಸ್ಪರ್ಧೆಯಲ್ಲಿ ಚಂದ್ರಿಕಾ ಪೂಜಾರಿ 5-0 ಅಂತರದಿಂದ ಕಜಾಕಸ್ತಾನದ ರಮಿನಾ ಮಖಾನೋವಾ ಅವರನ್ನು ಮಣಿಸಿದರು.

50 ಕೆಜಿ ವಿಭಾಗದಲ್ಲಿ ಅಹಾನಾ ಶರ್ಮಾ, 66 ಕೆಜಿ ವಿಭಾಗದಲ್ಲಿ ಹರ್ನೂರ್ ಕೌರ್, 80 ಕೆಜಿ ವಿಭಾಗದಲ್ಲಿ ಅನ್ಶಿಕಾ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಬಾಲಕರ ವಿಭಾಗದಲ್ಲಿ ಲ್ಯಾಂಚೆನ್ಬಾ ಸಿಂಗ್ (50) ಸೆಮಿಫೈನಲ್ನಲ್ಲಿ 5–0ಯಿಂದ ಕೊರಿಯಾದ ಆನ್ ಫ್ಯೊಂಗ್ ಗುಕ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.