ಶನಿವಾರ, ಆಗಸ್ಟ್ 15, 2020
26 °C

ಬೇಜವಾಬ್ದಾರಿ ಪಾಲಕರು ರೋಹಿತ್ ಶರ್ಮಾ ದಂಪತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಗಳಿಸಿ ವಿಶ್ವದಾಖಲೆ ಬರೆದ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಭಾನುವಾರ ಬೆಳಗಿನ ಜಾವ ಮುಂಬೈಗೆ ಮರಳಿದರು. ಆದರೆ, ವಿಮಾನ ನಿಲ್ದಾಣದಿಂದಲೇ ಅವರು ಟೀಕೆಗಳನ್ನು ಎದುರಿಸಬೇಕಾಯಿತು.

ಅಚ್ಚರಿಯೆಂದರೆ ತಂಡದ ಸೋಲಿನ ಕುರಿತ ಯಾವ ಟೀಕೆಯೂ ಅದರಲ್ಲಿ ಇರಲಿಲ್ಲ. ಬದಲಿಗೆ ರೋಹಿತ್ ಮತ್ತು ರಿತಿಕಾ ಸಜ್ದೆ ದಂಪತಿಯು ’ಬೇಜವಾಬ್ದಾರಿ ಪಾಲಕರು’ ಎಂಬ ಟೀಕೆಗೆ ಗುರಿಯಾದರು. ವಿಮಾನ ನಿಲ್ದಾಣದಿಂದ ಹೊರಬಂದ ಅವರು ತಮ್ಮ ಎಸ್‌ಯುವಿ ಕಾರ್‌ ಅನ್ನು ಚಾಲನೆ ಮಾಡಲು ಅಣಿಯಾದರು.

ಚಾಲಕನ ಪಕ್ಕದ ಆಸನದಲ್ಲಿ ರಿತಿಕಾ ಅವರು ತಮ್ಮ ಮಗು ಸಮೈರಾಳನ್ನು ತಮ್ಮ ಕಾಲುಗಳ ಮೇಲೆ ಕೂರಿಸಿಕೊಂಡು ಕುಳಿತರು.

ಇದನ್ನು ನೋಡಿದ ಟೋನಿ ಎಂಬುವವರು, ‘ಮೂರ್ಖತನ ಮಾಡಬೇಡಿ. ಮಗುವಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿಕೊಂಡಿಲ್ಲವೇಕೆ?’ ಎಂದು ಟ್ವೀಟ್ ಮಾಡಿದರು. ಅದರ ಬೆನ್ನಲ್ಲಿಯೇ ಹಲವರು ಅದಕ್ಕೆ ಪ್ರತಿಕ್ರಿಯಿಸಿದರು.

‘ಮುಂದಿನ ಸೀಟ್‌ನಲ್ಲಿ  ತಮ್ಮ ತೊಡೆಯ ಮೇಲೆ ಮಗುವನ್ನು ಕೂರಿಸಿಕೊಂಡಿದ್ದಾರೆ. ಎಂತಹ ಬೇಜವಾಬ್ದಾರಿತನ ಇದು. ಅದರಲ್ಲೂ ಭಾರತದಲ್ಲಿ ಜನರು ಚಾಲನೆ ಮಾಡುವ ರೀತಿಯನ್ನು ನೋಡಿದರೆ ಭಯವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

 
 
 
 

 
 
 
 
 
 
 
 
 

#rohitsharma takes the drivers seat as he heads back home #viralbhayani @viralbhayani

A post shared by Viral Bhayani (@viralbhayani) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು