ಕ್ಯಾಲಿಗ್ರಫಿ ಒಂದು ಸುಂದರ ಬರವಣಿಗೆಯ ವಿನ್ಯಾಸದ ಕಲೆ. ಅಕ್ಷರಗಳನ್ನು ಪದಗಳನ್ನು, ವಾಕ್ಯಗಳನ್ನು ಅತ್ಯಂತ ಚಿತ್ತಾಕರ್ಷಕವಾಗಿ ಬರೆಯುವುದು ವ್ಯಕ್ತಿಯ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ ಎಂದೆನ್ನಬಹುದು.

ನಿಮ್ಮ ಸ್ನೇಹಿತರ ಗುಂಪಿನಲ್ಲಿ ಸುಂದರ ಅಕ್ಷರ ಶೈಲಿಯಿಂದಲೇ ಗುರುತಿಸಲ್ಪಡುವ ವ್ಯಕ್ತಿಗೆ ಇತರರಿಗಿಂತ ಬೆಲೆ ಹೆಚ್ಚು. ಆತ/ಆಕೆ ತನ್ನ ಬರವಣಿಗೆಯ ಸ್ಟೈಲಿನಿಂದಲೇ ಗುರುತಿಸಲ್ಪಡುತ್ತಾರೆ. ಅಂದದ ಬರವಣಿಗೆ ಕ್ರಿಯಾಶೀಲ ವ್ಯಕ್ತಿತ್ವದ ಸೂಚಕವೂ ಹೌದು.

ನೀವೂ ಅಂತಹ ವಿಶಿಷ್ಟ ಬರವಣಿಗೆ ಮತ್ತು ವಿನ್ಯಾಸವನ್ನು ಕಲಿತು ಕ್ಯಾಲಿಗ್ರಾಫರ್ ಆಗಬೇಕೆ? ಅದಕ್ಕಾಗಿ ನೀವು ಯಾವುದೇ ಪದವಿ ಅಥವಾ ಹೆಚ್ಚು ಅಂಕ ಪಡೆದುಕೊಂಡು ಯಾವುದೇ ವಿಶ್ವವಿದ್ಯಾಲಯಕ್ಕೆ ಸೇರಬೇಕಾದದ್ದೇನೂ ಇಲ್ಲ, ಏಕೆಂದರೆ ಕ್ಯಾಲಿಗ್ರಾಫಿಗೆ ಸಂಬಂಧಿಸಿದ ಯಾವ ವಿಶ್ವವಿದ್ಯಾಲಯಗಳೂ ಭಾರತದಲ್ಲಿಲ್ಲ.

ಆದರೆ ಕ್ಯಾಲಿಗ್ರಫಿ ತರಬೇತಿ ನೀಡುವ ಕೆಲವು ಸಂಸ್ಥೆಗಳಿವೆ. ಈ ಸಂಸ್ಥೆಗಳು ಹಲವು ವಾರಗಳಿಂದ ಹಿಡಿದು ಹಲವು ತಿಂಗಳವರೆಗೆ ತರಬೇತಿ ನೀಡಿ ನಿಮ್ಮನ್ನು ಒಳ್ಳೆಯ ಕ್ಯಾಲಿಗ್ರಾಫರ್ ಆಗಿಸುವುದರಲ್ಲಿ ಎರಡು ಮಾತಿಲ್ಲ

ಕ್ಯಾಲಿಗ್ರಾಫ್ ಕಲಿಕೆಯಿಂದ ಬಿಡುವಿನ ವೇಳೆಯಲ್ಲಿ ನಿಮ್ಮದೇ ಸ್ವಯಂ ಉದ್ಯೋಗವನ್ನು ಕೈಗೊಳ್ಳಬಹುದು ಅಥವಾ ಪ್ರಿಂಟಿಂಗ್ ಶಾಪ್‌ಗಳಲ್ಲಿ, ಗ್ರೀಟಿಂಗ್ ಕಾರ್ಡ್ ಕಂಪೆನಿಗಳಲ್ಲಿ, ಪಬ್ಲಿಷಿಂಗ್ ಕಂಪನಿಗಳಲ್ಲಿ, ವೆಡ್ಡಿಂಗ್ ಪ್ಲಾನಿಂಗ್ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಬಹುದು.

ಇಂದು ಕಂಪ್ಯೂಟರ್ ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಬಳಕೆಯಿಂದಾಗಿ ಕ್ಯಾಲಿಗ್ರಫಿ ಕಲೆ ನಶಿಸುತ್ತಿದೆ ಎಂದು ಹಲವರು ವಾದಿಸುತ್ತಾರೆ. ಆದರೆ ಪ್ರಖ್ಯಾತ ಕ್ಯಾಲಿಗ್ರಾಫರ್ ಮತ್ತು ಗ್ರಾಫಿಕ್ ಡಿಸೈನರ್‌ಗಳ ಪ್ರಕಾರ ಈ ಕಲೆ ಶತಮಾನಗಳ ಹಿಂದಿನಿಂದ ಹುಟ್ಟು ಪಡೆದುಕೊಂಡಿದ್ದರೂ ಇಂದಿಗೂ ಪ್ರಸ್ತುತವೇ. ಡಿಜಿಟಲ್ ಮೀಡಿಯಾದಲ್ಲೂ ಕೂಡ ಕ್ಯಾಲಿಗ್ರಫಿ ಯಥೇಚ್ಛವಾಗಿ ಬಳಕೆಯಾಗುತ್ತದೆ.

ಇಂದು ಕ್ಯಾಲಿಗ್ರಫಿ ಡಿಸೈನ್ ಗ್ರಾಫಿಕ್ಸ್, ಟೈಪೋಗ್ರಾಫಿ, ಟೈಪ್ ಫೇಸ್ ಡಿಸೈನ್ ಡೆಸ್ಕ್ ಟಾಪ್, ವಾಲ್ ಪೇಪರ್ಸ್, ಮ್ಯೋನ್ ಸ್ಕ್ರಿಪ್ಟ್ಸ್ ಡಿಸೈನ್, ಹಾರ್ಡಿಂಗ್ ಡಿಸೈನ್, ದೂರದರ್ಶನ ಮತ್ತು ಚಲನ ಚಿತ್ರಗಳಲ್ಲಿ ಚಿತ್ರಗಳ ಚಲನೆ ಮತ್ತು ಜಾಹೀರಾತುಗಳನ್ನು ರೂಪಿಸುವಲ್ಲಿ ಈ ಕಲೆ ಬಹು ಉಪಯೋಗಿ, ಇಲ್ಲಿ ಪೆನ್ ಮತ್ತು ಕಂಪ್ಯೂಟರ್ ಆಧಾರಿತ ಕ್ಯಾಲಿಗ್ರಫಿ ಎರಡರ ಬಳಕೆಯೂ ಸಾಧ್ಯ.

ಈ ಕಲೆಯು ಫ್ಯಾಷನ್ ಡಿಸೈನಿಂಗ್ ಮತ್ತು ಇಂಟೀರಿಯರ್ ಡಿಸೈನಿಂಗ್ ವಲಯಕ್ಕೂ ಕೂಡ ವ್ಯಾಪಿಸಿದೆ.

ನೀವು ಕ್ಯಾಲಿಗ್ರಾಫರ್ ಆಗ್ತೀರಾ?
ಕ್ಯಾಲಿಗ್ರಫಿಯಲ್ಲಿ ಆಸಕ್ತಿ, ಕಲಾತ್ಮಕ ಚಿಂತನೆಯೊಂದಿಗೆ ಕ್ರಿಯಾಶೀಲತೆ ಅಪೂರ್ವವಾದ ಪರಿಕಲ್ಪನೆ, ಆ ಪರಿಕಲ್ಪನೆಯನ್ನು ಇತರರಿಗೆ ತಿಳಿಯಪಡಿಸುವ ಮಟ್ಟಕ್ಕೆ ಕೈಚಳಕ ಅತ್ಯುತ್ತಮ ಕ್ಯಾಲಿಗ್ರಾಫರ್ ನೀವಾಗಬೇಕಾದರೆ, ನಿಮಗೆ ಆ ಕಲೆಯಡೆಗೆ ಅತಿಯಾದ ಸೆಳೆತದೊಂದಿಗೆ ಸುಂದರ ನಕ್ಷೆಗಳನ್ನು, ಚಿತ್ರಗಳನ್ನು ಸಿದ್ಧಪಡಿಸುವ ಹೆಚ್ಚಿನ ಕೌಶಲವಿರಬೇಕಾಗುತ್ತದೆ. ಜೊತೆಯಲ್ಲಿ ತಾಳ್ಮೆ ಹಾಗೂ ಸಹಿಷ್ಣುತಾ ಮನೋಭಾವ, ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಆ ಹಂತವನ್ನು ತಲುಪಬಹುದು.

ಕ್ಯಾಲಿಗ್ರಫಿ ಸಲಕರಣೆ ಗೊತ್ತೇ?
ಪೇಪರ್, ಡಿಜಿಟಲ್ ಸಾಧನಗಳು, ವಿಭಿನ್ನ ಬಣ್ಣಗಳಲ್ಲಿ ಡಿಸೈನಿಂಗ್ ಸಾಫ್ಟ್ ವೇರ್‌ಗಳ ಬಳಕೆಯ ಜ್ಞಾನ ಅವಶ್ಯಕ. ಕ್ಯಾಲಿಗ್ರಫಿ ಪೆನ್‌ಗಳು, ಮಾರ್ಕರ್‌ಗಳು, ಆರ್ಟ್ ಬ್ರಶ್‌ಗಳು, ಫೋಮ್ ರೋಲರ್‌ಗಳು, ಶೇವಿಂಗ್ ಬ್ರಶ್‌ಗಳು, ಟೂತ್ ಬ್ರಶ್, ದಾರ, ಕೋಕ್ ಕ್ಯಾನ್, ಬಾಲ್ ಬಿಯರಿಂಗ್‌ಗಳು, ಜೊತೆಗೆ ನಿಮ್ಮ ಕೈ ಮತ್ತು ಕಾಲುಗಳು ಸಹ ಅದ್ಭುತವಾದ ಕಲೆಯನ್ನು ರೂಪಿಸುವ ಸಾಧನಗಳಾಗಬಲ್ಲವು.

ಎಲ್ಲಿ ಕಲಿಯಬಹುದು?
ಕ್ಯಾಲಿಗ್ರಫಿ ತರಬೇತಿ ನೀಡುವ ಕೆಲವು ಸಂಸ್ಥೆಗಳು ಇಲ್ಲಿವೆ.
* ಶ್ರೀ ಯೋಗೇಶ್ವರಿ ಇನ್‌ಸ್ಟಿಟ್ಯೂಟ್ ಆಫ್ ಹ್ಯಾಂಡ್ ರೈಟಿಂಗ್ ಬೆಂಗಳೂರು,
ವೆಬ್ ಸೈಟ್ : www.handwritingone.com/calligraphy.aspx

* ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಫಾರ್ ಆರ್ಟ್ಸ್ (ಐ.ಜಿ.ಎನ್.ಸಿ.ಎ) ನವದೆಹಲಿ.

* ಕ್ಯಾಲಿಗ್ರಫಿ ಇಂಡಿಯಾ ನವದೆಹಲಿ, ನೊಯ್ಡೊ, ಛತ್ತೀಸ್‌ಗಡ.
ವೆಬ್ ಸೈಟ್- www. calligraphyindia.com

* ಅಚ್ಯುತ್ ಪಲ್ಲವ್ ಸ್ಕೂಲ್ ಆಫ್ ಕ್ಯಾಲಿಗ್ರಫಿ ಮುಂಬೈ,
ವೆಬ್ ಸೈಟ್-www. apsc.net.in

* ವಿಕ್ರಾಂತ್ ಕರಿಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮುಂಬೈ
ವೆಬ್ ಸೈಟ್- www.vkart.in

* ನ್ಯೂ ಲರ್ನಿಂಗ್ ಹಾರಿಜಾನ್ಸ್ ಆರ‌್ಟಿಸ್ಟಿಕ್ ಕ್ಯಾಲಿಗ್ರಫಿ, ನಾಗಪುರ,
ವೆಬ್ ಸೈಟ್- www.nlhnagpur.info

* ಬ್ರ್ರೈಟ್‌ರೈಟ್ ಇಂದೋರ್
ವೆಬ್ ಸೈಟ್- www.writerightindia.com/calligraphy.html.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.