ಇಂದಿನ ಪ್ರಪಂಚದ ಎಲ್ಲಾ ಬೆಳವಣಿಗೆಗೆ ಜ್ಞಾನವೇ ಮೂಲ ಕಾರಣ. ಜ್ಞಾನವನ್ನು ಅವಿಷ್ಕಾರದ ಬೇರು ಎಂದು ಪರಿಗಣಿಸಲಾಗುತ್ತದೆ. ಇಂತಹ ಜ್ಞಾನವನ್ನು ಪಡೆಯಲು ಇರುವ ಮಾರ್ಗವೆಂದರೆ ಪುಸ್ತಕಗಳು. ಪುಸ್ತಕಗಳು ಜ್ಞಾನದ ವಾಹಿನಿಯಂತೆ.

ಪ್ರಕಾಶನ ಕ್ಷೇತ್ರ: ಭಾರತದಲ್ಲಿ ಓದುಗರ ಸಂಖ್ಯೆ ಹೆಚ್ಚಾದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ಪುಸ್ತಕಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.

ಇದರಿಂದ ದೇಶದಲ್ಲಿ ಹಲವಾರು ಪುಸ್ತಕ ಪ್ರಕಾಶನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪ್ರಕಾಶನ ಸಂಸ್ಥೆಗಳಲ್ಲಿ ವಿವಿಧ ರೀತಿಯಲ್ಲಿ ತರಬೇತಿ ಹೊಂದಿದ ನೂರಾರು ಅಭ್ಯರ್ಥಿಗಳಿಗೆ ವಿವಿಧ ರೀತಿಯ ಉದ್ಯೋಗದ ಅವಕಾಶಗಳು ಹೆಚ್ಚಾಗಿವೆ.

ಉದ್ಯೋಗಾವಕಾಶಗಳು: ಪ್ರಕಾಶನ ಸಂಸ್ಥೆಗಳಲ್ಲಿ ಹಸ್ತಪ್ರತಿಯ ರಚನೆಯಿಂದ ಹಿಡಿದು ಪುಸ್ತಕ ಪ್ರಕಟವಾಗಿ ಹೊರ ಬರುವವರೆಗೆ ವಿವಿಧ ಹಂತಗಳಲ್ಲಿ ತಜ್ಞರ ಪಾತ್ರವಿರುತ್ತದೆ.

ಅದರಲ್ಲೂ ಮುಖ್ಯವಾಗಿ ಸಂಪಾದಕೀಯ, ವಿನ್ಯಾಸ, ಉತ್ಪಾದನೆ, ಜಾಹೀರಾತು ಪ್ರಚಾರ ಮತ್ತು ಮಾರುಕಟ್ಟೆ ಇತ್ಯಾದಿ. ಪ್ರೂಫ್ ರೀಡರ್, ಸಂಶೋಧನ ಸಹಾಯಕ, ಕಾಫಿ ಎಡಿಟರ್, ಸಹಾಯಕ ಸಂಪಾದಕ, ವಿಷಯ ಸಂಪಾದಕ,

ಉಪಸಂಪಾದಕ - ಹೀಗೆ ಹಲವು ಹುದ್ದೆಗಳು ಲಭ್ಯ. ಮಾರುಕಟ್ಟೆಯ ಬಗ್ಗೆ ಆಸಕ್ತಿ ಇದ್ದರೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸಬಹುದು. ಹಲವು ವರ್ಷಗಳ ಅನುಭವದ ನಂತರ ಸ್ವಂತ ಪ್ರಕಾಶನ ಸಂಸ್ಥೆಯನ್ನು ಆರಂಭಿಸುವ ಅವಕಾಶಗಳೂ ಇರುತ್ತವೆ.

ಅಭ್ಯರ್ಥಿಗಳಿಗೆ ಬೇಕಾದ ಅರ್ಹತೆ: ತಾವು ಯಾವ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ ಎಂಬುದನ್ನು ಅಭ್ಯರ್ಥಿಗಳೇ ನಿರ್ಧರಿಸಿಕೊಳ್ಳಬೇಕು. ಬರವಣಿಗೆ, ಹಸ್ತಪ್ರತಿ ತಿದ್ದುಪಡಿ ತಜ್ಞರು, ಮಾರುಕಟ್ಟೆ ತಜ್ಞರು, ಡಿ.ಟಿ.ಪಿ. ಆಪರೇಟರ್‌ಳು, ಛಾಯಾಗ್ರಾಹಕರು, ಗ್ರಾಫಿಕ್ ತಜ್ಞರು, ಪ್ರಿಂಟಿಂಗ್ ಮತ್ತು ಬೈಂಡಿಂಗ್ ತಜ್ಞರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ವಿದ್ಯಾರ್ಹತೆ ಏನಿರಬೇಕು?
ಪಿಯುಸಿಯಿಂದ ಸ್ನಾತಕೋತ್ತರ ಪದವೀಧರರವರೆಗೆ ಪ್ರಕಾಶನ ಸಂಸ್ಥೆಯಲ್ಲಿನ ವಿವಿಧ ವಿಭಾಗಗಳಲ್ಲಿ ಉದ್ಯೋಗ ಲಭ್ಯವಿದೆ.

ವೇತನಭತ್ಯೆ ಇತ್ಯಾದಿ: ವೇತನ ಮತ್ತು ಭತ್ಯೆ ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ ಮತ್ತು ಅಭ್ಯರ್ಥಿ ಪಡೆದಿರುವ ಕೌಶಲದ ಮೇಲೆ ನಿರ್ಧಾರವಾಗುತ್ತದೆ. ಆರಂಭಿಕ ಹಂತದ ವೇತನ ಶ್ರೇಣಿ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚಾಗಿರುತ್ತದೆ. ಅನುಭವ ಕೌಶಲ ಹೆಚ್ಚಾದಂತೆ 30-40 ಸಾವಿರ ರೂಪಾಯಿ ವೇತನ ಸಿಗುತ್ತದೆ.

ತರಬೇತಿ ಮತ್ತು ಕೋರ್ಸ್‌ಗಳು ಎಲ್ಲಿ?
ಅಣ್ಣಾಮಲೆ ವಿಶ್ವವಿದ್ಯಾಲಯ, ಮಹಾತ್ಮಗಾಂಧಿ ವಿಶ್ವವಿದ್ಯಾಲಯ (ಕೇರಳ), ಕಲ್ಕತ್ತಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಶಂಕರ್ಸ್ ಅಕಾಡೆಮಿ (ಹೊಸದೆಹಲಿ) ಮತ್ತು ಇತರ ಖಾಸಗಿ ಸಂಸ್ಥೆಗಳು ಆರು ತಿಂಗಳ ಡಿಪ್ಲೊಮಾ, 1 ವರ್ಷ ಅಥವಾ 2 ವರ್ಷದ ಪಿ.ಜಿ. ಡಿಪ್ಲೊಮಾ ಅಥವಾ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ದೇಶದಲ್ಲಿ ನೀಡುತ್ತಿವೆ. ಕೆಲವೊಂದು ಆನ್‌ಲೈನ್ ಕೋರ್ಸ್‌ಗಳೂ ಲಭ್ಯವಿವೆ. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ನಿಯಮಿತವಾಗಿ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತದೆ.

ನವೀನ ರೀತಿಯ ಬರವಣಿಗೆ, ಸಂಶೋಧನಾ ಮನೋಭಾವ, ಮಾಹಿತಿ ಕಲೆ ಹಾಕುವ ಸಾಮರ್ಥ್ಯ, ಭಾಷೆಯ ಮೇಲೆ ಹಿಡಿತ - ಇವುಗಳನ್ನು ರೂಢಿಸಿಕೊಂಡರೆ ಅಭ್ಯರ್ಥಿಗಳು ತ್ವರಿತವಾಗಿ ಈ ಕ್ಷೇತ್ರದಲ್ಲಿ ಉನ್ನತಿ ಸಾಧಿಸಬಹುದು. ಆ ಮೂಲಕ ಜ್ಞಾನದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.