ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನ್‌ ಕೆ: ರೋಸ್‌ ಆಕರ್ಷಣೆ

ಮೇ 19ರಂದು ಬೆಂಗಳೂರಿನಲ್ಲಿ ವಿಶ್ವ 10ಕೆ ಮ್ಯಾರಥಾನ್‌
Last Updated 11 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆಯಲಿರುವ ವಿಶ್ವ 10ಕೆ ಮ್ಯಾರಥಾನ್‌ನಲ್ಲಿ ವಿಶ್ವ ಚಾಂಪಿಯನ್‌ ಓಟಗಾರ್ತಿ ರೋಸ್‌ ಚೆಲೀಮೊ ಪ್ರಧಾನ ಆಕರ್ಷಣೆಯಾಗಲಿದ್ದಾರೆ. ಮೇ 19ರಂದು ನಡೆಯುವ ಸ್ಪರ್ಧೆಯಲ್ಲಿ ಏಷ್ಯನ್‌ ಮ್ಯಾರಥಾನ್‌ ಚಿನ್ನ ವಿಜೇತೆಯೂ ಆಗಿರುವ ಚೆಲೀಮೊ ಮೋಡಿ ಮಾಡುವ ನಿರೀಕ್ಷೆಯಿದೆ.

ವಿವಿಧ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿರುವ ಒಂಬತ್ತು ಪುರುಷರು ಹಾಗೂ ಎಂಟು ಮಹಿಳಾ ಸ್ಪರ್ಧಿಗಳು ರೇಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಕೀನ್ಯಾದ ಎಗ್ನೆಸ್‌ ತೈರಪ್‌ ತಮ್ಮ ಪ್ರಶಸ್ತಿ ಉಳಿಸಿಕೊಳ್ಳಲು ಆಗಮಿಸಲಿದ್ದಾರೆ. ಟೈರಪ್‌ಗೆ ಈ ಬಾರಿ ಚೆಲೀಮೊ ಅವರಿಂದ ಭಾರೀ ಸವಾಲು ಎದುರಾಗುವ ನಿರೀಕ್ಷೆಯಿದೆ.

ಎರಡು ವರ್ಷಗಳ ಬಳಿಕ ಚೆಲೀಮೊ ಬೆಂಗಳೂರು 10ಕೆ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

2016ರ ಆವೃತ್ತಿಯಲ್ಲಿ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಆದರೆ ಆ ಬಳಿಕ ಅವರ ವೃತ್ತಿಜೀವನದ ಗ್ರಾಫ್‌ ಮೇಲೇರುತ್ತಲೇ ಸಾಗಿದೆ. 2017ರ ವಿಶ್ವ ಮ್ಯಾರಥಾನ್‌ ಚಾಂಪಿಯನ್‌ಷಿಪ್‌ ಹಾಗೂ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಗೆದ್ದ ಬಂಗಾರದ ಪದಕ ಅದನ್ನು ಸಾಕ್ಷೀಕರಿಸಿವೆ.

ಪುರುಷರ ವಿಭಾಗದಲ್ಲಿ ಕೀನ್ಯಾದ ಮ್ಯಾಥ್ಯೂ ಕಿಮೆಲಿ ಗಮನ ಸೆಳೆಯಲಿದ್ದಾರೆ. ಅವರ ವೈಯಕ್ತಿಕ ಅತ್ಯುತ್ತಮ ದಾಖಲೆ 27 ನಿಮಿಷ 11 ಸೆಕೆಂಡ್‌. ಎರಡು ವಾರಗಳ ಹಿಂದಷ್ಟೇ ಅವರು ಯುಎಇಯಲ್ಲಿ ನಡೆದ 10ಕೆ ಸ್ಪರ್ಧೆಯಲ್ಲಿ 27:45 ಸಮಯದಲ್ಲಿ ಗುರಿ ಮುಟ್ಟುುದರೊಂದಿಗೆ ಚಾಂಪಿಯನ್‌ ಆಗಿದ್ದರು.

ಅಂದಾಜು ₹ 1.5 ಕೋಟಿ ಒಟ್ಟು ಬಹುಮಾನ ಮೊತ್ತದ ಸ್ಪರ್ಧೆ ಇದಾಗಿದೆ. ಎಲೈಟ್‌ ವಿಭಾಗದಲ್ಲಿ ಐದು ಮಂದಿ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಭಾರತದ ಪ್ರದೀಪ್‌ ಸಿಂಗ್‌ ಚೌಧರಿ, ರಂಜೀತ್‌ ಕುಮಾರ್‌ ಹಾಗೂ ಪಾರುಲ್‌ ಚೌಧರಿ ಸೇರಿದ್ದಾರೆ.

ವಿಶ್ವ 10ಕೆ ದಾಖಲೆ ಹೊಂದಿರುವ ಕೀನ್ಯಾದ ಜಾಯ್‌ಸಿಲಿನ್‌ ಜೆಪ್‌ಕೊಸ್ಕೆಯ್‌ ಹಾಗೂ ಕರೋಲಿನ್‌ ಕಿಪ್ಕಿರಿಯು ಅವರು ಗಾಯದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT