ಶನಿವಾರ, ಸೆಪ್ಟೆಂಬರ್ 25, 2021
22 °C

ತರಬೇತಿ ವೇಳೆ ಅವಘಡ; ಆರ್ಚರಿ ಪಟು ಶಿವಾಂಗಿನಿಗೆ ಚುಚ್ಚಿದ ಬಾಣ

ಪಿಟಿಐ Updated:

ಅಕ್ಷರ ಗಾತ್ರ : | |

Shivangini Gohain

 ನವದೆಹಲಿ: ಅಸ್ಸಾಂ ಮೂಲದ ಆರ್ಚರಿ ಪಟು ಶಿವಾಂಗಿನಿ ಗೊಹೇನ್‌ಗೆ ತರಬೇತಿ ವೇಳೆ ಎರಡು ಬಾಣಗಳು ಚುಚ್ಚಿದ್ದು, ಸರ್ಜರಿ ಮೂಲಕ ಬಾಣಗಳನ್ನು ಹೊರ ತೆಗೆಯಲಾಗಿದೆ. 12ರ ಹರೆಯದ ಶಿವಾಂಗಿನಿಯ ಕುತ್ತಿಗೆ ಮತ್ತು ಶರೀರದ ಮೇಲ್ಭಾಗಕ್ಕೆ ಎರಡು ಬಾಣಗಳು ಚುಚ್ಚಿತ್ತು. ಶುಕ್ರವಾರ ಏಮ್ಸ್‌ನಲ್ಲಿ ಸರ್ಜರಿ ನಡೆದಿದ್ದು 15 ಸೆ.ಮೀ ಉದ್ದದ ಲೋಹದ ತುಂಡನ್ನು ದೇಹದಿಂದ  ಹೊರ ತೆಗೆಯಲಾಗಿದೆ.

ಗುರುವಾರ ರಾತ್ರಿ ಆಕೆಯನ್ನು ವಿಮಾನ ಮೂಲಕ ಅಸ್ಸಾಂನ ದಿಬ್ರುಗಢ್‌ನಿಂದ ಏಮ್ಸ್‌ಗೆ ಕರೆತರಲಾಗಿತ್ತು. ತುಂಬಾ ಕ್ಲಿಷ್ಟಕರವಾದ ಸರ್ಜರಿ ನಂತರ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್‌ನ ಹಿರಿಯ ವೈದ್ಯರು ಹೇಳಿದ್ದಾರೆ.

ಭುಜದ ಎಲುಬು ಮೂಲಕ ಒಳಹೊಕ್ಕ ಬಾಣವು ಆಕೆಯ ಕುತ್ತಿಗೆ, ಬೆನ್ನೆಲುಬು ಮತ್ತು ಎಡ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡಿತ್ತು. ಸರ್ಜರಿ ನಂತರ ಶಿವಾಂಗಿನಿಯನ್ನು ಐಸಿಯುಗೆ ದಾಖಲಿಸಲಾಗಿದೆ.

ಬಾಣದ 15 ಸೆಮಿ ಭಾಗವು ಶರೀರದ ಮೇಲ್ಭಾಗಕ್ಕೆ ಚುಚ್ಚಿತ್ತು. ಇದರಲ್ಲಿ 0.5 ಸೆಮೀ  ಮಿದುಳು ಬಳ್ಳಿಯ ಮುಂಭಾಗಕ್ಕೆ ಚುಚ್ಚಿದ್ದರಿಂದ ಕ್ಷಿಷ್ಟಕರವಾದ ಸರ್ಜರಿ ಆಗಿತ್ತು. ಏಮ್ಸ್  ನ್ಯೂರೊಸರ್ಜರಿ ಪ್ರೊಫೆಸರ್ ಡಾ. ದೀಪಕ್ ಗುಪ್ತಾ ನೇತೃತ್ವದ ವೈದ್ಯರ ತಂಡವು ಸುಮಾರು ಮೂರೂವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಚುಬುವಾದಲ್ಲಿರುವ ದಾಖಾ ದೇವಿ ರಸಿವಾಸಿಯಾ  ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಶಿವಾಂಗಿನಿಗೆ  ಚುಚ್ಚಿದೆ. ಬುಧವಾರ ಘಟನೆ ನಡೆದಿದ್ದು ಗುರುವಾರ ಸಂಜೆ ನವದೆಹಲಿಯ ಏಮ್ಸ್‌ಗೆ ದಾಖಲಿಸುವ ವರೆಗೆ ಬಾಣ ಆಕೆ ದೇಹದಲ್ಲಿಯೇ ಇತ್ತು. ಸ್ಥಳೀಯ ಕೋಚ್‌ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎಂದು ರಾಜ್ಯ ಆರ್ಚರಿ ಅಸೋಸಿಯೇಷನ್ ದೂರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು