ಮಂಗಳವಾರ, ಜನವರಿ 28, 2020
17 °C

ಆರ್ಚರಿ ಸಂಸ್ಥೆ ಚುನಾವಣೆ 18ಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಆರ್ಚರಿ ಸಂಸ್ಥೆಯ(ಎಎಐ) ಚುನಾವಣೆಯು ಜನವರಿ 18ರಂದು ನಡೆಯಲಿವೆ ಎಂದು ತಿಳಿಸಲಾಗಿದೆ.

ದೆಹಲಿ ಹೈ ಕೋರ್ಟ್‌ ಪಿ.ಕೆ.ತ್ರಿಪಾಠಿ ಅವರನ್ನು ಚುನಾವಣೆಗಳ ರಿಟರ್ನಿಂಗ್‌ ಅಧಿಕಾರಿಯಾಗಿ ನೇಮಿಸಿದೆ. ಅಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಉಪಾಧ್ಯಕ್ಷರು (ಎಂಟು ಮಂದಿ), ಗೌರವ ಮಹಾ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳು (ಏಳು ಮಂದಿ) ಹಾಗೂ ಖಜಾಂಚಿ ಹುದ್ದೆಗಳಿಗೆ ಚುನಾವಣೆಗಳು ನಡೆಯಲಿದೆ.

ಈ ಕುರಿತು ದೆಹಲಿ ಹೈಕೋರ್ಟ್ ನವಂಬರ್‌ನಲ್ಲಿ ಆದೇಶ ನೀಡಿತ್ತು. 31 ರಾಜ್ಯ ಸಂಸ್ಥೆಗಳು ಮತದಾನದಲ್ಲಿ ಪಾಲ್ಗೊಳ್ಳಲಿವೆ. ಆದರೆ ಉತ್ತರ ಪ್ರದೇಶ, ಬಿಹಾರ್‌, ಹಿಮಾಚಲ ಪ್ರದೇಶ, ಪಂಜಾಬ್‌, ಜಮ್ಮು ಕಾಶ್ಮೀರ ಮತ್ತು ನಾಗಾಲ್ಯಾಂಡ್‌ ಪ್ರತಿನಿಧಿಸುವ ರಾಜ್ಯ ಘಟಕಗಳು ಪಾಲ್ಗೊಳ್ಳುತ್ತಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು